ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಇಂದು ಒಟ್ಟೂ 3176 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಒಟ್ಟೂ 87 ಜನರು ಸಾವಿಗೀಡಾಗಿದ್ದಾರೆ. ಇದು ಈವರೆಗಿನ ಎಲ್ಲ ದಾಖಲೆಗಳನ್ನು ಮುರಿದಿದೆ.
ರಾಜ್ಯದಲ್ಲಿ ಒಟ್ಟೂ 47253 ಜನರಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ.
ಇಂದು ಬೆಂಗಳೂರಿನಲ್ಲಿ 1975 ಜನರಿಗೆ ಸೋಂಕು ತಗುಲಿದೆ. 60 ಜನರು ಸಾವಿಗೀಡಾಗಿದ್ದಾರೆ. ಧಾರವಾಡ 139, ಬಳ್ಳಾರಿ 136, ಮೈಸೂರು 99, ವಿಜಯಪುರ 80, ದಕ್ಷಿಣ ಕನ್ನಡ 76, ಕಲಬುರಗಿ 67, ಉಡುಪಿ 52, ಯಾದಗಿರಿ 49, ಉತ್ತರ ಕನ್ನಡ 48, ಬೆಳಗಾವಿ 41, ಗದಗ 39, ಬೀದರ್, ದಾವಣಗೆರೆ 35, ಬಾಗಲಕೋಟೆ 34, ಚಿಕ್ಕಬಳ್ಳಾಪುರ 32, ಮಂಡ್ಯ 31, ಶಿವಮೊಗ್ಗ 29, ರಾಯಚೂರು 26, ಹಾಸನ 25, ತುಮಕೂರು 24, ಕೊಡಗು 23, ಕೋಲಾರ 15, ಕೊಪ್ಪಳ 14, ಚಿಕ್ಕಮಗಳೂರು 13, ಚಿತ್ರದುರ್ಗ 12,ಬೆಂಗಳೂರು ಗ್ರಾಮಾಂತರ 10, ಚಾಮರಾಜನಗರ 8, ಹಾವೇರಿ 6, ರಾಮನಗರ 3 ಜನರಿಗೆ ಸೋಂಕು ಪತ್ತೆಯಾಗಿದೆ.
ಇಂದು ಧಾರವಾಡದಲ್ಲಿ 5, ಮೈಸೂರಿನಲ್ಲಿ 6 ಜನರು ಸಾವಿಗೀಡಾಗಿದ್ದಾರೆ. ಉತ್ತರ ಕನ್ನಡ ಹಾಗೂ ಬಾಗಲಕೋಟೆಯಲ್ಲಿ ತಲಾ 3 ಜನರು ಸಾವಿಗೀಡಾಗಿದ್ದಾರೆ.
ಹಿಂಡಲಗಾ ಜೈಲಿನ 11 ಕೈದಿಗಳಿಗೆ ಸೋಂಕು ಪತ್ತೆಯಾಗಿದ್ದು, ಜೈಲಿನ ಕೈದಿಗಳಲ್ಲಿ ಆತಂಕ ಶುರುವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ