Latest

ಸ್ಥಳದಲ್ಲೇ 9 ವಿದ್ಯಾರ್ಥಿಗಳ ಸಾವು

 

ಸ್ಥಳದಲ್ಲೇ 9 ವಿದ್ಯಾರ್ಥಿಗಳ ಸಾವು

ಪ್ರಗತಿವಾಹಿನಿ ಸುದ್ದಿ, ಪುಣೆ-

ಪುಣೆ-ಸೊಲ್ಲಾಪುರ ಹೆದ್ದಾರಿಯ ಕದಂವಕ್ ವಸ್ತಿ ಗ್ರಾಮದ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Home add -Advt

ಶುಕ್ರವಾರ ತಡರಾತ್ರಿ ಕಾರು ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿವೆ. ಅಕ್ಷಯ್ ಭರತ್ ವೈಕರ್, ವಿಶಾಲ್ ಸುಭಾಷ್ ಯಾದವ್, ನಿಖಿಲ್ ಚಂದ್ರಕಾಂತ್, ನೂರ್ ಮಹಮ್ಮದ್ ಅಬ್ಬಾಸ್ ದಯಾ, ಪರ್ವೇಜ್ ಅತ್ತರ್, ಶುಭಂ ರಾಮ್ದಾಸ್ ಭಿಸೆ, ಅಕ್ಷಯ್ ಚಂದ್ರಕಾಂತ್, ದತ್ತ ಗಣೇಶ್ ಯಾದವ್, ಜುಬೇರ್ ಅಜೀಜ್ ಮುಲಾನಿ ಮೃತರು. ಪುಣೆಯ ಯಾವತ್ ಗ್ರಾಮದವರಾದ ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳು.

ಇವರೆಲ್ಲ ರಾಯಗಢಕ್ಕೆ ಪ್ರವಾಸಕ್ಕೆ ತೆರಳಿ ಪುಣೆಗೆ ಮರಳುವಾಗ ಅಪಘಾತ ಸಂಭವಿಸಿದೆ. ಕಾರು ಡಿವೈಡರ್ ಬಳಿ ಜಂಪ್ ಆಗಿದೆ. ಅದೇ ಸಮಯಕ್ಕೆ ಪುಣೆ ಕಡೆಯಿಂದ ಬರುತ್ತಿದ್ದ ಬರುತ್ತಿದ್ದ ಟ್ರಕ್‌ ಗೆ ಡಿಕ್ಕಿ ಹೊಡೆದಿದೆ.

ಪುಣೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Back to top button