
ಪ್ರಗತಿವಾಹಿನಿ ಸುದ್ದಿ: ಹಾಲ್ ಟಿಕೆಟ್ ಕುರಿ ತಿಂದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಲ ಗ್ರಾಮದಲ್ಲಿ ನಡೆದಿದೆ.
ಪೂಜಾ ಮಾರುತಿ ಮೇತ್ರೆ (14) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ. 9ನೇ ತರಗತಿ ಓದುತ್ತಿದ್ದ ಪೂಜಾಳ ಹಾಲ್ ಟಿಕೆಟ್ ನ್ನು ಕುರಿ ತಿಂದಿತ್ತು. ಇದರಿಂದ ಮನನೊಂದ ವಿದ್ಯಾರ್ಥಿನಿ ಹೆಡ್ ಮಾಸ್ಟರ್ ಗೆ ಪತ್ರ ಬರೆದಿದ್ದಾಳೆ. ತನ್ನನ್ನು ಕ್ಷಮಿಸಿ. ನನಗೆ ಶಾಲೆಗೆ ಬರಲು ಸಾಧ್ಯವಿಲ್ಲ. ನಾನು ಸತ್ತುಹೋಗುತ್ತಿದ್ದೇನೆ ಎಂದು ಡೆತ್ ನೋಟ್ ಬರೆದು ಬಾವಿಗೆ ಹಾರಿದ್ದಾಳೆ.
ಅದೃಷ್ಟವಶಾತ್ ಬಾವಿಯಲ್ಲಿ ಹೆಚ್ಚಿನ ನೀರು ಇರಲಿಲ್ಲ. ಹಾಗಾಗಿ ಬಾಲಕಿ ನೀರಲ್ಲಿ ಮುಳುಗಿಲ್ಲ. ಬಾವಿಯೊಳಗೆ ಬಾಲಕಿ ಅಳುತ್ತಿರುವುದನ್ನು ಗಮನಿಸಿದ ಪೋಷಕರು ಹೋಗಿ ನೀಡಿದಾಗ ಪೂಜಾ ಬಾವಿಗೆ ಹಾರಿದ್ದು ಗೊತ್ತಾಗಿದೆ. ಸಧ್ಯ ಬಾಲಕಿಯನ್ನು ರಕ್ಷಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ