Kannada NewsKarnataka NewsLatest

*ಪತ್ನಿ ಕಿರುಕುಳ: ಗೋಡೆ ಮೇಲೆಯೇ ಡೆತ್ ನೋಟ್ ಬರೆದು ಪತಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪತ್ನಿ ಕಿರುಕುಳ ತಾಳಲಾರದೇ ಪತಿ ಮಹಾಶಯನೊಬ್ಬ ಗೋಡೆ ಮೇಲೆಯೇ ಡೆತ್ ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Home add -Advt

ಸೈಯ್ಯದ್ ಅಕ್ಮಲ್ ಅನ್ಸರ್ (34) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಘಟನೆ ಸಂಬಂಧ ಪತ್ನಿ ಖತೀಜ ಕುಬ್ರಾ, ಮಾವ ಮುನಾವರ್ ಸುಬಾನ್, ಪತ್ನಿ ಸಂಬಂಧಿಕರಾದ ಅಖೀಬ್, ಅಬ್ದುಲ್ ರಹಮಾನ್ ಮನ್ಸೂರ್ ಸೇರಿದಂತೆ 7 ಜನರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಅನೈತಿಕ ಸಂಬಂಧ ಹಾಗೂ ವಿಚ್ಛೇಧನಕ್ಕಾಗಿ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಪತಿ ಸೈಯ್ಯದ್ ಆರೋಪಿಸಿದ್ದಾನೆ. ಪತ್ನಿ ಕುಬ್ರಾ ಪತಿಯ ಮೇಲೆ ಪದೇ ಪಡೆ ಅನುಮಾನ ಪಡುತ್ತಿದ್ದಳು. ಅಲ್ಲದೇ ಖರ್ಚು ವೆಚ್ಚಕ್ಕೆ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸುತ್ತಿದ್ದಳು. ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೋಡೆಯ ಮೇಲೆ ಸೈಯ್ಯದ್ ಬರೆದಿಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button