Belagavi NewsBelgaum NewsCrimeKarnataka NewsLatest

*ಸರಗಳ್ಳತನ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 22/08/2026 ರಂದು ಹಾಗೂ ನಿಪ್ಪಾಣಿ ವ್ಯಾಪ್ತಿಯಲ್ಲಿ ದಿನಾಂಕ 01/09/2026 ರಂದು ನಡೆದ ಸರಗಳ್ಳತನ ಪ್ರಕರಣಗಳು ಮತ್ತು ಗೋಕಾಕ್ ವ್ಯಾಪ್ತಿಯಲ್ಲಿ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾನಾಪುರದಲ್ಲಿ ನಡೆದ ಒಟ್ಟು ಮೂರು ಸರಗಳ್ಳತನದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಮಕನಮರಡಿ ಪೊಲೀಸ್ ಇನ್ಸ್‌ಪೆಕ್ಟರ್ ಜಾವೀದ ಎಫ್. ಮುಶಾಪುರಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು.

Home add -Advt

ತನಿಖಾ ತಂಡದ ಕಾರ್ಯಾಚರಣೆ:
ತನಿಖಾ ತಂಡದ ಸದಸ್ಯರಾದ ಪಿಎಸ್ಐ ವೀರಪ್ಪ ಲಾಡಿ, ಪಿಎಸ್ಐ (ಹೆಚ್‌ಪಿಎಲ್-2) ಆರ್. ಎ. ಪಾಟೀಲ, ಪಿಎಸ್ಐ (ಅ) ಬಿ. ಕೆ. ಪಾಟೀಲ ಹಾಗೂ ಸಿಬ್ಬಂದಿಗಳಾದ ಬಿ. ನಾಗಣ್ಣವರ (ಸಿಪಿಸಿ-3105), ಆತ್ಮಾರಾಮ ಜಂಗಮ (ಸಿಪಿಸಿ-1307), ಬಿ ಎಚ್ ಕುರಿ (ಎಎಸ್‌ಐ-1250), ಬಿ ವೈ ಮನ್ನಾಪುರ (ಸಿಪಿಸಿ-1041), ಬಿ ಎ ಬಂಡಗರ (ಸಿಪಿಸಿ-3171), ಶಂಕರ ಚೌಗಳಾ (ಸಿಪಿಸಿ-1320), ಮಹೇಶ ಕರಗುಪ್ಪಿ (ಸಿಪಿಸಿ-1203), ಪಿ. ಆರ್. ಪೂಜಾರಿ (ಸಿಪಿಸಿ-3278) ರವರನ್ನೊಳಗೊಂಡ ತಂಡವು ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ಫೂಟೇಜ್‌ಗಳನ್ನು ವಿಶ್ಲೇಷಿಸಿ, ಖಚಿತ ಮಾಹಿತಿ ಮೇರೆಗೆ ದಿನಾಂಕ 06/09/2026 ರಂದು ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದ ಬಳಿ ಆರೋಪಿತರನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದಿದ್ದಾರೆ.

ದಸ್ತಗಿರಿಯಾದ ಆರೋಪಿತರ ವಿವರ:

  • ಎ1: ನವೀನ ಅಶೋಕ ಮಡಿವಾಳರ (19 ವರ್ಷ), ಸಾ: ಅಂಕಲಗಿ, ಹಾಲಿ ವಾಸ: ಸಿದ್ದೇಶ್ವರ ಗಲ್ಲಿ, ಕಣಬರಗಿ, ತಾ: ಬೆಳಗಾವಿ.
  • ಎ2: ಈಶ್ವರ ಗೋರಕನಾಥ ಕಾರಭಾರಿ (20 ವರ್ಷ), ಸಾ: ರಾಮಾಪೂರ ತಾಂಡಾ, ಹಾಲಿ ವಾಸ: ಸಿದ್ದೇಶ್ವರ ಗಲ್ಲಿ, ಕಣಬರಗಿ, ತಾ: ಬೆಳಗಾವಿ.
  • ಎ3: ಮಹೇಶ ಸಿದರಾಯಿ ಹಿತ್ತಲಮನಿ (20 ವರ್ಷ), ಸಾ: ಕಣಬರಗಿ, ತಾ: ಬೆಳಗಾವಿ.
  • ಇವರೊಂದಿಗೆ ಕೃತ್ಯದಲ್ಲಿ ಶಾಮೀಲಾಗಿದ್ದ ಓರ್ವ 16 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲ ನ್ಯಾಯ ಮಂಡಳಿ ನಿಯಮಾವಳಿಯಂತೆ ಹಾಜರುಪಡಿಸಲಾಗಿದೆ.

ವಶಪಡಿಸಿಕೊಂಡ ಸ್ವತ್ತು:
ಮೇಲಿನ ಮೂರು ಸರಗಳ್ಳತನ ಪ್ರಕರಣಗಳಲ್ಲಿನ ಬಂಗಾರದ ಜೊತೆಗೆ ಕಳ್ಳತನಕ್ಕೆ ಉಪಯೋಗಿಸಿದ ಎರಡು ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.

ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿ, ಆರೋಪಿಗಳು ಹಾಗೂ ಕಳವಾದ ಸ್ವತ್ತನ್ನು ಪತ್ತೆಹಚ್ಚಿಕೊಳ್ಳುವಲ್ಲಿ ಯಶಸ್ವಿಯಾದ ಯಮಕನಮರಡಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Related Articles

Back to top button