Latest

ಈ ನಟ, ಸಂಗೀತಗಾರ ದಂಪತಿ ಹೊಟ್ಟೆಪಾಡಿಗೆ ಮಾಡಿದ ಕೆಲಸಗಳು ಒಂದೆರಡಲ್ಲ..

ಪ್ರಗತಿವಾಹಿನಿ ಸುದ್ದಿ, ಮುಂಬೈ:  ನಟ, ಗಾಯಕ ಗಿಪ್ಪಿ ಗ್ರೆವಾಲ್ ಹಾಗೂ ಅವರ ಪತ್ನಿ ರವನೀತ್ ಕೌರ್ ಕೆನಡಾದಲ್ಲಿ ತಮ್ಮ ಸಂಗೀತ ವೃತ್ತಿಜೀವನಕ್ಕಾಗಿ ಏನೆಲ್ಲ ಕೆಲಸ ಮಾಡಿದ್ದರು ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಅವರು ಪ್ರಮುಖವಾದ ಮೂರು ಕೆಲಸಗಳನ್ನು ಹೇಳಿಕೊಂಡಿದ್ದು  ಮೊದಲನೆಯದಾಗಿ ಅವರು ಬೆಳಿಗ್ಗೆ ಮನೆಮನೆಗೆ ಪತ್ರಿಕೆಗಳನ್ನು ಹಂಚಿದ್ದಾರಂತೆ.  ಕಾರ್ಖಾನೆಯಲ್ಲಿ ಇಬ್ಬರೂ ಸೇರಿ ಮಾರ್ಬಲ್ ನಂತಹ ವಸ್ತುಗಳಿಂದ ಇಟ್ಟಿಗೆಗಳನ್ನು ತಯಾರಿಸುತ್ತಿದ್ದರಂತೆ.

Home add -Advt

ಇದಲ್ಲದೆ ರಾತ್ರಿ ವೇಳೆ ತಾವು ಮತ್ತು ತಮ್ಮ ಹೆಂಡತಿ ಫುಡ್ ಕೋರ್ಟ್ ಗಳಲ್ಲಿ ಶುಚಿಗೊಳಿಸುವ, ನೆಲ ಒರೆಸುವ, ಜನ ಆಹಾರ ಸೇವಿಸಿದ ನಂತರ ಪ್ಲೇಟ್ ಗಳನ್ನು ತೆಗೆಯುವ  ಕೆಲಸ, ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.

ಇಷ್ಟಕ್ಕೇ ಮುಗಿದಿಲ್ಲ, ಅವರ ಹೆಂಡತಿ ಉಪರಸ್ತೆಗಳಲ್ಲಿ ಸ್ಯಾಂಡ್‌ವಿಚ್‌ಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ ಎಂದು ಗಿಪ್ಪಿ ಹೇಳಿದ್ದಾರೆ.

ಮದುವೆ ಊಟದ ವಿಷಯದಲ್ಲಿ ಆಲಿಯಾ- ರಣಬೀರ್ ತುಂಬಾ ಹಣ ಉಳಿಸಿದ್ದಾರಂತೆ !

Related Articles

Back to top button