Latest

ಮುರುಘಾಮಠಕ್ಕೆ ಉಸ್ತುವಾರಿಯಾಗಿ ಬೇರೆ ಸ್ವಾಮೀಜಿ ನೇಮಕ

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮುರುಘಾಶ್ರೀಗಳನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ. ಡಾ.ಶಿವಮೂರ್ತಿ ಮುರುಘಾಶ್ರೀಗಳ ಬಂಧನದಿಂದಾಗಿ ಮಠಕ್ಕೆ ಪೀಠಾಧಿಪತಿ ಇಲ್ಲದಂತಾಗಿದ್ದು ಇಡೀ ಮಠ ಬಿಕೋ ಎನ್ನುತ್ತಿದೆ.

ರಾಜ್ಯದ ಹಲವೆಡೆ ಶೈಕ್ಷಣಿಕ ಸಂಸ್ಥೆ ನಡೆಸುತ್ತಿರುವ, ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಾಜಕೀಯವಾಗಿಯೂ ಶಕ್ತಿ ಕೇಂದ್ರದಂತಿದ್ದ ಚಿತ್ರದುರ್ಗದ ಬೃಹನ್ ಮುರುಘಾ ಮಠದಲ್ಲಿ ಇದೀಗ ಹಿರಿಯರ ದಿಕ್ಕೇ ಇಲ್ಲದಂತಾಗಿದೆ. ಮಠದ ಆಗುಹೋಗು, ಜವಾಬ್ದಾರಿ ನೋಡಿಕೊಳ್ಳುವ ನಿಟ್ಟಿನಲ್ಲಿ ಇದೀಗ ತಾತ್ಕಾಲಿಕ ಉಸ್ತುವಾರಿಯನ್ನು ಮುರುಘಾ ಮಠಕ್ಕೆ ನೇಮಿಸಲಾಗಿದೆ.

ದಾವಣಗೆರೆಯ ಹೆಬ್ಬಾಳದಲಿರುವ ಮುರುಘಾಮಠದ ಶಾಖಾ ಮಠದ ಮಹಾಂತರುದ್ರ ಸ್ವಾಮೀಜಿಗಳನ್ನು ಚಿತ್ರದುರ್ಗ ಮುರುಘಾ ಮಠದ ತಾತ್ಕಾಲಿಕ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಮಹಾಂತರುದ್ರ ಶ್ರೀಗಳು ಮುರುಘಾಮಠದ ಶಾಖಾ ಮಠಗಳಲ್ಲಿಯೇ ಅತ್ಯಂತ ಹಿರಿಯರು. ಮುರುಘಾ ಪರಂಪರೆಯನ್ನು ತಪ್ಪದೇ ಪಾಲಿಸುತ್ತಾ ಬಂದಂತವರು ಈ ಹಿನ್ನೆಲೆಯಲ್ಲಿ ಮಠದ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಮಹಾಂತರುದ್ರ ಶ್ರೀಗಳಿಗೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.

ಮುರುಘಾಶ್ರೀ ಬಂಧನ ವಿಚಾರ; ಸಿಎಂ ಬೊಮ್ಮಾಯಿ ಹೇಳಿದ್ದೇನು?

https://pragati.taskdun.com/latest/murughashreecollaps-in-jailheart-painbangalore-shift/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button