ನಿದ್ದೆಗೆಡಿಸಿದ ಚಿರತೆ: ಬೆಳ್ಳಂಬೆಳಗ್ಗೆ ಗಾಲ್ಫ್ ಮೈದಾನದ ತುಂಬ ಪೊಲೀಸ್, ಅರಣ್ಯ ಸಿಬ್ಬಂದಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಒಂದು ತಿಂಗಳಿನಿಂದ ಬೆಳಗಾವಿ ಜನರ ನಿದ್ದೆಗಿಡಿಸಿರುವ ಚಿರತೆ ಕಳೆದ 10 ದಿನಗಳಿಂದ ತನ್ನ ಇರುವಿನ ಕುರಿತು ಯಾವ ಸುಳಿವನ್ನೂ ನೀಡುತ್ತಿಲ್ಲ. ಹಾಗಾಗಿ ಇದು ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ.
ಭಾನುವಾರ ಬೆಳ್ಳಂಬೆಳಗ್ಗೆ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಸೇರಿ ಚಿರತೆ ಪತ್ತೆಗೆ ಬೃಹತ್ ಕಾರ್ಯಾಚರಣೆ ನಡೆಸಿದರು. 150 ಅರಣ್ಯ ಸಿಬ್ಬಂದಿ ಹಾಗೂ 100 ಪೊಲೀಸ್ ಸಿಬ್ಬಂದಿ ಸೇರಿ ಒಟ್ಟೂ 250 ಜನರು ಕಾರ್ಯಾಚರಣೆ ನಡೆಸಿದರು.
2 ಆನೆಗಳೊಂದಿಗೆ ಪಟಾಕಿಗಳನ್ನು ಸಿಡಿಸುತ್ತ ಕಾರ್ಯಾಚರಣೆ ನಡೆಸಲಾಯಿತು. ಇಡೀ ಗಾಲ್ಫ್ ಮೈದಾನವನ್ನು ಶೋಧಿಸಲಾಯಿತು. ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತಾದರೂ ಚಿರತೆಯ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.
ಚಿರತೆ ಗಾಲ್ಫ್ ಮೈದಾನ ಬಿಟ್ಟು ಹೊರಗೆ ಹೋಗಿರಬಹುದು ಎನ್ನುವ ಸಂಶಯ ಕಳೆದ 10 ದಿನಗಳಿಂದ ವ್ಯಕ್ತವಾಗುತ್ತಿದೆ. ಯಾವುದೇ ಕ್ಯಾಮರಾದಲ್ಲಿ ಸಹ ಕಾಣಿಸಲಿಲ್ಲ. ಅಷ್ಟು ದಿನಗಳವರೆಗೆ ಅವಿತರಲು ಸಾಧ್ಯವಿಲ್ಲ. ಹಾಗಾಗಿ ಅದು ಬೇರೆಡೆಗೆ ಓಡಿಹೋಗಿರಬಹುದು ಎನ್ನುವ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಯಿತು.
ಕಳೆದ ಆಗಷ್ಟ್ 5ರಂದು ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿತ್ತು. ಅಲ್ಲಿಂತ ಸುತ್ತಲಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಮಧ್ಯದಲ್ಲಿ ಕೆಲವು ದಿನವಷ್ಟೆ ತೆರೆಯಲಾಗಿತ್ತು. ಹಾಗಾಗಿ 22 ಶಾಲೆಗಳ ಸುಮಾರು 10 ಸಾವಿರ ಮಕ್ಕಳ ಶಿಕ್ಷಣದ ಭವಿಷ್ಯಕ್ಕೂ ಹೊಡೆತ ಬಿದ್ದಿದೆ.
ವಿಪರ್ಯಾಸವೆಂದರೆ ಈಗಲೂ ಚಿರತೆಯ ಬಗ್ಗೆ ಸ್ಪಷ್ಟತೆ ಸಿಗದ್ದರಿಂದ ಆತಂಕ ಹಾಗೆಯೇ ಮುಂದುವರಿಯುವಂತಾಗಿದೆ.
ಇನ್ನೂ ಬೆಳಗಾವಿ ಬಿಟ್ಟಿಲ್ಲ ಚಿಂತೆಗೀಡು ಮಾಡಿದ ಚಿರತೆ; ಹಿಂಡಲಗಾ ಡಬಲ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷ !
https://pragati.taskdun.com/local/leopard-appear-road-belagavicity-anxious-trap-mobile-camera/
https://pragati.taskdun.com/karnataka-news/education-karnataka-news/belgaum-education-department-has-issued-an-important-notice-to-22-schools/
https://pragati.taskdun.com/latest/cheetah-just-missed-again/
https://pragati.taskdun.com/latest/cheetah-operation-failed-on-friday-too/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ