Latest

ಮಗು ಹೆತ್ತು ಶಾಲೆ ಬಳಿಯ ಪೊದೆಯಲ್ಲಿ ಬಿಟ್ಟು ಹೋದ 16 ವರ್ಷದ ವಿದ್ಯಾರ್ಥಿನಿ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: 11ನೇ ತರಗತಿಯಲ್ಲಿ ಓದುತ್ತಿರುವ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಗು ಹೆತ್ತು ಯಾರಿಗೂ ತಿಳಿಯದಂತೆ ಶಾಲೆ ಬಳಿಯ ಪೊದೆಯೊಂದರಲ್ಲಿ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ.

ತಮಿಳುನಾಡು ಜಿಲ್ಲೆಯ ಕಡಲೂರು ಜಿಲ್ಲೆಯ ಭುವನಗಿರಿಯಲ್ಲಿ ಈ ಘಟನೆ ನಡೆದಿದೆ. ಪೊದೆಯಲ್ಲಿ ಮಗುವಿನ ಶವ ಕಂಡ ಇನ್ನೊಬ್ಬ ವಿದ್ಯಾರ್ಥಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ವೇಳೆ ಈ ವಿಷಯ ಬಹಿರಂಗಗೊಂಡಿದೆ.

ಇಷ್ಟಕ್ಕೂ ಈ ವಿದ್ಯಾರ್ಥಿನಿಗೆ ಈ ಮಗು ಪ್ರಾಪ್ತಿ ಮಾಡಿದ್ದು ಆಕೆಗಿಂತ ಕಿರಿಯ ಬಾಲಕ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ. ಆತ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಪೋಕ್ಸೋ ಕಾಯಿದೆಯಡಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ನೇಗಿನಾಳ ಸ್ವಾಮೀಜಿ ಆತ್ಮಹತ್ಯೆ : ಡೆತ್ ನೋಟ್ ಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button