Kannada NewsKarnataka NewsLatest

ಕೆಎಲ್ಎಸ್  ಜಿಐಟಿಯಿಂದ ಎಚ್ಎಎಲ್ ಮ್ಯಾನೇಜ್ ಮೆಂಟ್ ಅಕಾಡೆಮಿಯೊಂದಿಗೆ ಜಂಟಿ ಕೋರ್ಸ್ ಆಯೋಜನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಏರೋನಾಟಿಕಲ್ ವಿಭಾಗವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಅಕಾಡೆಮಿ (ಹೆಚ್ ಎಂ ಎ) , ಬೆಂಗಳೂರು ಸಹಯೋಗದೊಂದಿಗೆ “ವಿಮಾನ ವ್ಯವಸ್ಥೆಗಳು, ಪರೀಕ್ಷೆ ಮತ್ತು ಉತ್ಪಾದನಾ ಪ್ರಕ್ರಿಯೆಗಳು” ಕುರಿತು 15 ದಿನಗಳ ಸಂಪೂರ್ಣ ಪ್ರಾಯೋಜಿತ ವೃತ್ತಿಪರ ಕೋರ್ಸ್ ನ್ನು 5 ರಿಂದ 17 ರವರೆಗೆ ಆಯೋಜಿಸಿದೆ.

ಈ ಕಾರ್ಯಕ್ರಮವನ್ನು ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಪ್ರದೀಪ ಸಾವಕಾರ್ ಅವರು ಉದ್ಘಾಟಿಸಿ , ಕೆಎಲ್ಎಸ್ ಜಿಐಟಿ ಮತ್ತು ಹೆಚ್ಎಂಎ ನಡುವಿನ ನಡುವಿನ ಸಹಯೋಗ ಉದ್ಯಮಕ್ಕೆ ಸಿದ್ಧವಾದ ಏರೋನಾಟಿಕಲ್ ಎಂಜಿನಿಯರ್‌ಗಳನ್ನು ಒದಗಿಸುವ ವಿಷಯದಲ್ಲಿ ಫಲಪ್ರದವಾಗಲಿದೆ ಎಂದರು.

ಎಚ್‌ಎಂಎ ಕಾರ್ಯನಿರ್ವಾಹಕ ನಿರ್ದೇಶಕ ರಾದ  ಡಾ.ಜಿ.ಶ್ರೀಕಂಠ ಶರ್ಮಾ ಮಾತನಾಡಿ, “ಕೋರ್ಸ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ಎಚ್‌ಎಂಎಯಲ್ಲಿ ಲಭ್ಯವಿರುವ ಪರಿಣತಿ ಬಳಸಿಕೊಂಡು ತಮ್ಮ ಸೈದ್ಧಾಂತಿಕ ಜ್ಞಾನವನ್ನು ವಿವಿಧ ಎಚ್‌ಎಎಲ್ ವಿಭಾಗಗಳಲ್ಲಿ ಪ್ರಾಯೋಗಿಕ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೆಎಲ್‌ಎಸ್ ಜಿಐಟಿ ಪ್ರಾಂಶುಪಾಲ ಡಾ.ಜಯಂತ್‌ ಕಿತ್ತೂರು ಮಾತನಾಡಿ, ಪ್ರಸ್ತುತ ಏರೋನಾಟಿಕಲ್ ಮತ್ತು ಡಿಫೆನ್ಸ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ವಿಮಾನ ವ್ಯವಸ್ಥೆಗಳು ಮತ್ತು ಉತ್ಪಾದನಾ ಪ್ರಕ್ರಿಯೆಗಳ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಅಭಿವೃದ್ಧಿಪಡಿಸಲು ಈ ಕೋರ್ಸ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ, ಹಾಗೂ ಮುಂಬರುವ ದಿನಗಳಲ್ಲಿ ಜಿಐಟಿ ಉತ್ತಮ ಏರೋನಾಟಿಕಲ್ ಎಂಜಿನಿಯರ್ ಗಳನ್ನು ದೇಶಕ್ಕೆ ಕೊಡಲಿದೆ ಎಂದು ತಿಳಿಸಿದರು.

 ಕೆಎಲ್‌ಎಸ್ ಜಿಐಟಿ ಎಂಎಎಂ ಜಿಸಿ ಸದಸ್ಯ ಅತುಲ್ ಆಲೂರ್,  ಕೆಎಲ್ಎಸ್ ಸದಸ್ಯ ಅಶೋಕ ಕುಲಕರ್ಣಿ,  ವಿಭಾಗಮುಖ್ಯಸ್ಥ ಎರೋನಾಟಿಕಲ್ ಡಾ. ಟಿ.ಆರ್. ಅನಿಲ,  ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ .ಆದರ್ಶ ಕೃಷ್ಣಮೂರ್ತಿ, ಎಚ್ಎಎಂ ಪ್ರಧಾನ ವ್ಯವಸ್ಥಾಪಕ ಪ್ರೊ. ಜಾನಿ ಥಾಮಸ್, ಉಪ ಪ್ರಧಾನ ವ್ಯವಸ್ಥಾಪಕ  ಸೂರ್ಯನಾರಾಯಣ ಮೆಹೆಂದಳೆ ಮತ್ತು ಬೆಂಗಳೂರಿನ ಎಚ್ಎಂಎನ ಇತರ ಅಧ್ಯಾಪಕರು   ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ತಿಮಿಂಗಲ ವಾಂತಿ ಕಳ್ಳಸಾಗಣೆ; ನಾಲ್ವರ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button