ಪ್ರಗತಿ ವಾಹಿನಿ, ಬೆಳಗಾವಿ –
ನಗರದ ಹಿಂದವಾಡಿಯ ಗುರುದೇವ ರಾನಡೆ ಮಂದಿರದಲ್ಲಿ, ಸೆ. 16 ರಂದು ಸಂಜೆ 5.30 ಕ್ಕೆ ಗುರುದೇವ ರಾನಡೆ ಅವರ ಅನುಯಾಯಿಯಾಗಿದ್ದ ದಿ. ಡಾ. ಎಂ.ಎಲ್. ಶರ್ಮಾ ಬರೆದಿರುವ ಮಿಸ್ಟಿಸಿಸಂ ಎಂಡ್ ಕಂಟೆಂಪರರಿ ಫಿಲಾಸಫಿ ಎಂಬ ಪುಸ್ತಕ ಬಿಡುಗಡೆಗೊಳ್ಳಲಿದೆ.
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾದೀಶ ಜಸ್ಟಿಸ್ ಬಿ. ಎಂ. ಶ್ಯಾಮಪ್ರಸಾದ ಪುಸ್ತಕವನ್ನು ಬಿಡುಗಡೆಗೊಳಿಸುವರು. ಬೆಳಗಾವಿ ಜಿಲ್ಲಾ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್. ಎ. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕೆಎಲಿ ಬಿ. ವಿ. ಬೆಲ್ಲದ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ಬಿ. ಜಯಸಿಂಹ, ಕೆಎಲ್‌ಎಸ್‌ಆರ್‌ಎಲ್ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ಅನೀಲ್‌ಕುಮಾರ ಹವಲ್ದಾರ್, ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಪ್ರಭು ಯತ್ನಟ್ಟಿ, ಅಧಿವಕ್ತ ಪರಿಷತ್ ಅಧ್ಯಕ್ಷ ಸದಾಶಿವ ಹಿರೇಮಠ, ಅಕಾಡೆಮಿ ಆಫ್ ಕಂಪ್ಯಾರಿಟಿವ್ ಫಿಲಾಸಫಿ ಎಂಡ್ ರಿಲಿಜನ್ ಸಂಸ್ಥೆಯ ಅಧ್ಯಕ್ಷ ಅಶೋಕ ಪೋತದಾರ್, ಕಾರ್ಯದರ್ಶಿ ಮಾರುತಿ ಬಿ. ಝಿರಲಿ ಉಪಸ್ಥಿತರಿರುವರು.
ಅಕಾಡೆಮಿ ಆಫ್ ಕಂಪ್ಯಾರಿಟಿವ್ ಫಿಲಾಸಫಿ ಎಂಡ್ ರಿಲಿಜನ್ ಸಂಸ್ಥೆಯುವ ಕಾರ್ಯಕ್ರಮ ಆಯೋಜಿಸಿದೆ.
https://pragati.taskdun.com/latest/kle-prabhakara-koreveerabhadreshwara-awardbelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ