CrimeKannada NewsKarnataka NewsLatest

*ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂರೂವರೆ ವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಮೂರೂವರೆ ವರ್ಷದ ಮಗು ಖಾಸಗಿ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೃತಪಟ್ಟಿದೆ. ಸಂತೋಷದಿಂದ ಕಾಲ ಕಳೆಯಲು ಬಂದಿದ್ದ ಕುಟುಂಬದಲ್ಲಿ ಮಗುವಿನ ಸಾವು ಆಘಾತ ಮೂಡಿಸಿದೆ.

ರಾಮನಗರ ತಾಲೂಕಿನ ಹರಿಸಂದ್ರ ಗ್ರಾಮದ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಈ ದುರಂತ ಸಂಭವಿಸಿದೆ. ಮಣಿಪುರ ಮೂಲದ ಲೀನ್ ಮತ್ತು ಟ್ರೇಸಿ ದಂಪತಿಯ ಮೂರೂವರೆ ವರ್ಷದ ಪುತ್ರ ಇವಾನ್ ಮೃತಪಟ್ಟ ಮಗು.

ಬೆಂಗಳೂರಿನ ಕೊತ್ತನೂರು ಬಳಿ ವಾಸವಾಗಿರುವ ಕುಟುಂಬ ಸುಮಾರು 40 ಜನರೊಂದಿಗೆ ರೆಸಾರ್ಟ್‌ಗೆ ಪ್ರವಾಸ ಬಂದಿತ್ತು. ಈ ವೇಳೆ ದಂಪತಿ ಖಾಸಗಿ ಸ್ವಿಮ್ಮಿಂಗ್ ಪೂಲ್ ಹೊಂದಿರುವ ಕೊಠಡಿಯಲ್ಲಿ ತಂಗಿದ್ದರು. ಖಾಸಗಿ ಪೂಲ್‌ನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಗು ನೀರಿನಲ್ಲಿ ಮುಳುಗಿದೆ. ಕೂಡಲೇ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button