ಪ್ರಗತಿವಾಹಿನಿ ಸುದ್ದಿ, ಕರಾಚಿ: ನದಿಗೆ ಪ್ಲಾಸ್ಟಿಕ್ ಚೀಲ ಎಸೆದು ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದ್ದ ನಟಿ ರೇಶಮ್ ಟೀಕಾಸ್ತ್ರಗಳಿಂದ ಬಚಾವಾಗಲು ಹೊಸದೊಂದು ನೆಪ ಹೇಳಿದ್ದಾರೆ.
ತಾವು ಎರಡು ಬಾರಿ ಕೋವಿಡ್- 19 ಸೋಂಕಿಗೆ ಒಳಗಾಗಿದ್ದು ಇದು ತಮ್ಮ ಮೆದುಳಿನ ಮೇಲೆ ಪರಿಣಾಮ ಬೀರಿದೆ. ಈ ಪರಿಣಾಮಗಳು ಇನ್ನೂ ಇವೆ. ಇದರಿಂದಾಗಿ ತಾನು ಏನು ಮಾಡುತ್ತಿದ್ದೇನೆಂಬುದೇ ತಿಳಿಯುವುದಿಲ್ಲ. ನದಿಯಲ್ಲಿ ಪ್ಲಾಸ್ಟಿಕ್ ಎಸೆಯಲು ಕೂಡ ಇದೇ ಕಾರಣವೆಂದು ಅವರು ಹೇಳಿದ್ದಾರೆ.
ಆದರೆ ರೇಶಮ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ. ಬಹುತೇಕ ಜನ ಈ ಹೇಳಿಕೆಗೆ ರೇಶಮ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಇಂಥ ಕ್ಷುಲ್ಲಕ ಕಾರಣ ಕೊಟ್ಟು ನುಣುಚಿಕೊಳ್ಳದಂತೆ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ರೇಶಮ್ ಅವರು ನದಿಯೊಂದರಲ್ಲಿ ಮೀನುಗಳಿಗೆ ಆಹಾರ ಹಾಕುವ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಮೀನಿನ ಆಹಾರ ತಂದಿದ್ದ ಪ್ಲಾಸ್ಟಿಕ್ ಚೀಲ ಕೂಡ ನದಿಗೆ ಎಸೆದಿದ್ದು ಚಿತ್ರೀಕರಣವಾಗಿತ್ತು.
ನಕಲಿ ಪ್ರಮಾಣಪತ್ರ ನೀಡಿ ಮುಂಬಡ್ತಿ; ತಾಲೂಕು ಪಂಚಾಯಿತಿ ಅಧಿಕಾರಿ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ