Latest

ನಕಲಿ ಪ್ರಮಾಣಪತ್ರ ನೀಡಿ ಮುಂಬಡ್ತಿ; ತಾಲೂಕು ಪಂಚಾಯಿತಿ ಅಧಿಕಾರಿ ಬಂಧನ

ಪ್ರಗತಿವಾಹಿನಿ ಸುದ್ದಿ, ವಿಜಯನಗರ: ಮುಂಬಡ್ತಿ ಪಡೆಯುವ ಉದ್ದೇಶದಿಂದ ನಕಲಿ ಅಂಕಪಟ್ಟಿ ಮತ್ತು ಮೈಗ್ರೇಶನ್ ಪ್ರಮಾಣಪತ್ರಗಳನ್ನು ನೀಡಿದ ಆರೋಪದಡಿ ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಉಮೇಶ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಪರವಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶೈಲಾ ಎಸ್.ಕುಲಕರ್ಣಿ ಅವರು ನೀಡಿದ ದೂರಿನನ್ವಯ ಅವರನ್ನು ಬಂಧಿಸಲಾಗಿದೆ.

Home add -Advt

ಈ ಮೊದಲು ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯಿತಿಯಲ್ಲಿ ಅನುಕಂಪದ ಆಧಾರದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಕೆಲಸ ಪಡೆದಿದ್ದ ಉಮೇಶ ಗೌಡ ಅವರು ಮುಂಬಡ್ತಿ ಪಡೆಯುವ ಸಲುವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹೆಸರಲ್ಲಿ 2007, 2008 ಮತ್ತು 2009ನೇ ಸಾಲಿನ ಬಿಎ ಪದವಿಯ ನಕಲಿ ಅಂಕಪಟ್ಟಿ, ಪಾಸಿಂಗ್ ಹಾಗೂ ಮೈಗ್ರೇಶನ್ ನಕಲಿ ಪ್ರಮಾಣಪತ್ರಗಳನ್ನು ತಯಾರಿಸಿದ್ದರು. ಇದಕ್ಕೆ ಕಾರ್ಯನಿರ್ವಾಹಕ ಅಧಿಕಾರಿಯ ದೃಢೀಕರಣ ಪಡೆದು ಮುಂಬಡ್ತಿ ಪಡೆದಿದ್ದರು.

ಗರ್ಭಪಾತಕ್ಕಾಗಿ 2,250 ಕಿ.ಮೀ. ಬಲವಂತದ ಪ್ರಯಾಣ ಕೈಗೊಂಡ ಗರ್ಭಿಣಿ

Related Articles

Back to top button