ಪ್ರಗತಿವಾಹಿನಿ ಸುದ್ದಿ, ಭುಬನೇಶ್ವರ: ಭಾರತದಲ್ಲಿ ಅಳಿದು ಹೋಗಿದ್ದ ಚೀತಾ ಸಂತತಿ ಪುನಃ ಮುಂದುವರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ನಮಿಬಿಯಾದಿಂದ 8 ಚೀತಾಗಳನ್ನು ತಂದು ಬಿಟ್ಟಿರುವ ಬೆನ್ನಿಗೇ ಒಡಿಶಾದ ಭುಬನೇಶ್ವರ ನಂದನಕಾನನ್ ಝೂಲಾಜಿಕಲ್ ಪಾರ್ಕ್ ಅಧಿಕಾರಿಗಳು ಇನ್ನೊಂದು ಯೋಜನೆ ಹಮ್ಮಿಕೊಂಡಿದ್ದಾರೆ.
ನಂದನಕಾನನ್ ಝೂಲಾಜಿಕಲ್ ಪಾರ್ಕ್ ಗೆ ದುಬೈನಿಂದ ಎರಡು ಚೀತಾಗಳನ್ನು ತರಲು ಅಧಿಕಾರಿಗಳು ಉದ್ದೇಶಿಸಿದ್ದಾರೆ. ಮೃಗಾಲಯ ಮತ್ತು ದುಬೈ ಸಫಾರಿ ಪಾರ್ಕ್ ನಡುವೆ ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ಅವುಗಳನ್ನು ತರಲಾಗುತ್ತದೆ. ಮಣಿಪುರದ ಹುಬ್ಬು ಕೊಂಬಿನ ಜಿಂಕೆ, ಘೇಂಡಾಮೃಗ ಮತ್ತು ಕೃಷ್ಣಮೃಗಗಳಿಗೆ ಬದಲಾಗಿ ಐದು ಆಫ್ರಿಕನ್ ಬಿಳಿ ಸಿಂಹಗಳು ಮತ್ತು ಚಿಂಪಾಂಜಿಗಳನ್ನು ತರಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ.
ಈ ಯೋಜನೆ ಕಾರ್ಯಗತಗೊಂಡರೆ ಭಾರತದಲ್ಲಿ ಒಟ್ಟು 10 ಚೀತಾಗಳು ಹೊಸ ಸಂತತಿಯ ಪ್ರತಿನಿಧಿಗಳಾಗಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ