Latest

ಮೊಬೈಲ್ ನೆಲಕ್ಕೆ ಬೀಳಿಸಿ ಅದರ ಶಕ್ತಿ ಪರೀಕ್ಷಿಸಿದ ಸಚಿವ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶೀಯವಾಗಿ ತಯಾರಾದ ಮೊಬೈಲ್ ತಂತ್ರಜ್ಞಾನದ ಗುಣಮಟ್ಟದ ಪರೀಕ್ಷೆ ನಡೆಸಿದ ಸಚಿವರ ವೈಖರಿ ಈಗ ಎಲ್ಲೆಡೆ ವೈರಲ್ ಆಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಡಿಜಿಟಲ್ ತಂತ್ರಜ್ಞಾನ ವೇದಿಕೆ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ (IMC) ನಲ್ಲಿ ಭಾಗವಹಿಸಿದ್ದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಅದರ ಶಕ್ತಿಯನ್ನು ಪರೀಕ್ಷಿಸಲು ಉದ್ದೇಶಪೂರ್ವಕವಾಗಿ ಭಾರತದಲ್ಲಿ ತಯಾರಿಸಿದ ಸ್ಮಾರ್ಟ್‌ಫೋನ್ ಅನ್ನು ಕೈಬಿಟ್ಟು ನೆಲಕ್ಕೆ ಬೀಳಿಸಿದರು.

ಸಚಿವರು ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಈ ದೃಶ್ಯವಿದ್ದು ಈ ವೈರಲ್ ವಿಡಿಯೊಗೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

 

 

Related Articles

Back to top button