Kannada NewsLatest

ಗಾಳಿಪಟ ಹಾರಿಸುವಾಗ ಟೆರೇಸ್ ಮೇಲಿಂದ ಬಿದ್ದ ಬಾಲಕ; ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಟ್ಟಡದ ಮೇಲಿನಿಂದ ಗಾಳಿಪಟ ಹಾರಿಸುವಾಗ ಆಯತಪ್ಪಿ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯ ಉಜ್ವಲ್ ನಗರದಲ್ಲಿ ನಡೆದಿದೆ.

ಇಲ್ಲಿನ ಸೆಕೆಂಡ್ ಕ್ರಾಸ್ ತಿರಂಗಾ ಕಾಲೋನಿಯಲ್ಲಿ ಈ ದುರಂತ ಸಂಭವಿಸಿದ್ದು, 11 ವರ್ಷದ ಅರ್ಮಾನ್ ದಫೇದಾರ್ ಮೃತ ಬಾಲಕ. ಬಾಲಕ ಅರ್ಮಾನ್ ತನ್ನ ಅಣ್ಣನ ಜೊತೆ ಗಾಳಿಪಟ ಹಾರಿಸಲೆಂದು ಟೆರೇಸ್ ಮೇಲೆ ಹೋಗಿದ್ದಾನೆ. ಗಾಳಿಪಟ ಹಾರಿಸುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ.

Home add -Advt

ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾನೆ.

ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ಗಾಳಿಪಟ ಹಾರಿಸಲು ಹೋಗಿ ಬಿಲ್ಡಿಂಗ್ ನಿಂದ ಬಿದ್ದು ಬಾಲಕ ಸಾವನ್ನಪ್ಪಿರುವುದು ದುರ್ದೈವದ ಸಂಗತಿ ಎಂದು ನಗರಸೇವಕ ಅಫ್ಜಲ್ ಪಠಾಣ್ ದು:ಖ ವ್ಯಕ್ತಪಡಿಸಿದ್ದಾರೆ.

ಡೇ ಕೇರ್ ಸೆಂಟರ್ ಮೇಲೆ ಗುಂಡಿನ ದಾಳಿ; 23 ಮಕ್ಕಳು ಸೇರಿ 31 ಜನರ ಬರ್ಬರ ಹತ್ಯೆ

https://pragati.taskdun.com/world/thailand-daycare-centreshooting23-childrenamong-31-killed/

ಪಂಚಮಸಾಲಿ 2 ಎ ಮೀಸಲಾತಿ ಹೋರಾಟ ತೀವ್ರಗೊಳಿಸಲು ಸಿದ್ಧತೆ: ನಾಳೆ ಮೂಡಲಗಿಯಲ್ಲಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಸಭೆ

Related Articles

Back to top button