Latest

ರೈಲಿನಲ್ಲಿ ಪೂರೈಸಿದ ಸಮೋಸಾದಲ್ಲಿ ಹಳದಿ ಕಾಗದ ಪತ್ತೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಪ್ರಯಾಣಿಕ

ಪ್ರಗತಿವಾಹಿನಿ ಸುದ್ದಿ, ಮುಂಬೈ: ರೈಲಿನಲ್ಲಿ ಪೂರೈಸಲಾದ ಸಮೋಸಾದಲ್ಲಿ ಹಳದಿ ಕಾಗದ ಪತ್ತೆಯಾಗಿರುವ ಚಿತ್ರವನ್ನು ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಲಕ್ನೋ ಸಾಪ್ತಾಹಿಕ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಾಂದ್ರಾಕ್ಕೆ ಹೋಗುತ್ತಿದ್ದ   ಪ್ರಯಾಣಿಕರೊಬ್ಬರು ರೈಲಿನಲ್ಲಿ ಸಮೋಸಾಕ್ಕೆ ಆರ್ಡರ್ ಮಾಡಿದ್ದರು. 

ಸಮೋಸಾ ತಿನ್ನುವಾಗ ಅದರಲ್ಲಿ ಹಳದಿ ಕಾಗದ ಪತ್ತೆಯಾಯಿತು. ಅದರ ಚಿತ್ರವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಅವರು “ಐಆರ್ ಸಿಟಿಸಿ ಪೈರೈಸಿದ ಆಹಾರಕ್ಕಾಗಿ ಅವರಿಗೆ ನಮಸ್ಕಾರ” ಎಂದು ಒಕ್ಕಣೆ ಬೇರೆ ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಐಆರ್ ಸಿಟಿಸಿ (Indian Railway Catering and Tourism Corporation) ಅನಾನುಕೂಲತೆಗಾಗಿ ವಿಷಾದಿಸಿದ್ದು  “ದಯವಿಟ್ಟು Pnr ಮತ್ತು ಮೊಬೈಲ್ ಸಂಖ್ಯೆಯನ್ನು DM ನಲ್ಲಿ ಹಂಚಿಕೊಳ್ಳಿ.” ಹಂಚಿಕೊಳ್ಳಿ ಎಂದು ತಿಳಿಸಿದೆ.

Home add -Advt

“ರಾವಣ ರಾಮನ ಬಿಲ್ಲು ಬಾಣ ವಶಪಡಿಸಿಕೊಂಡ” ಎಂದ ಉದ್ಧವ ಠಾಕ್ರೆ

Related Articles

Back to top button