Kannada NewsLatest
ತಬಸ್ಸುಮ್ ಅನುಮಾನಾಸ್ಪದ ಸಾವು ಪ್ರಕರಣ; ಸ್ನೇಹಿತ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 19 ವರ್ಷದ ಯುವತಿ ತಬಸ್ಸುಮ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸ್ನೇಹಿತನನ್ನು ಬೆಳಗಾವಿ ಮಾರ್ಕೆಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಿಂದ ಕರೆತಂದು ಬೆಳಗಾವಿಯ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಿದ್ದ ಸ್ನೇಹಿತ ಬಳಿಯ ಯುವತಿ ಕುಟುಂಬದವರಿಗೆ ಮೆಸೇಜ್ ಮಾಡಿ ಪರಾರಿಯಾಗಿದ್ದ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು.
ಆಸ್ಪತ್ರೆಗೆ ದಾಖಲಿಸಿ ತಲೆಮರೆಸಿಕೊಂಡಿದ್ದ ಯುವತಿ ತಬಸ್ಸುಮ್ ಳ ಸ್ನೇಹಿತನನ್ನು ಇದೀಗ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ತಬಸ್ಸುಮ್ ತಲೆಗೆ ಏಟು ಬಿದ್ದಿದ್ದು ಹೇಗೆ ? ಕುತೂಹಲಕಾರಿ ತಿರುವು ಪಡೆದ ಪ್ರಕರಣ
https://pragati.taskdun.com/local/how-did-tabassum-hit-her-head-a-case-with-an-interesting-twist/




