Kannada NewsLatest

ಕಲ್ಲೋಳಿಯಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ : ಬಾಲಚಂದ್ರ ಜಾರಕಿಹೊಳಿ 

ಪ್ರಗತಿವಾಹಿನಿ ಸುದ್ದಿ, ಮೂಡಲಗಿ :

ಕಲ್ಲೋಳಿ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
  ಸಾರ್ವಜನಿಕರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದ ಗೋಕಾಕ-ಮೂಡಲಗಿ ರಸ್ತೆಯ ತುಕ್ಕಾನಟ್ಟಿ ಕ್ರಾಸ್‌ನಲ್ಲಿ ಸಮಾನತೆಯ ಹರಿಕಾರ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡುವುದಾಗಿ ಅವರು ಹೇಳಿದರು.
ಪಟ್ಟಣದ ಎಲ್ಲ ಸಮಾಜಗಳ ಮುಖಂಡರುಗಳು ಪುತ್ಥಳಿ ನಿರ್ಮಾಣದ ಬಗ್ಗೆ ಒಮ್ಮತದ ನಿರ್ಣಯ ತೆಗೆದುಕೊಂಡಿರುವುದು ಸ್ವಾಗತಾರ್ಹ. ಸಾರ್ವಜನಿಕರ ಬೇಡಿಕೆಯಂತೆ ತುಕ್ಕಾನಟ್ಟಿಗೆ ಹೋಗುವ ಮಾರ್ಗ(ಬಸ್ ನಿಲ್ದಾಣದ ಪಕ್ಕ)ದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿಯನ್ನು ನಿರ್ಮಿಸುವುದಾಗಿ ಅವರು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ಧುರೀಣ ಸುಭಾಸ ಕುರಬೇಟ, ಮುಖಂಡ ಬಸವಂತ ದಾಸನವರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ತಾಪಂ ಮಾಜಿ ಸದಸ್ಯ ಅಶೋಕ ಮಕ್ಕಳಗೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಪ್ಪ ಹೆಬ್ಬಾಳ, ಮಹಾಂತೇಶ ಕಪ್ಪಲಗುದ್ದಿ, ಬಸವರಾಜ ಕಡಾಡಿ, ಅಜೀತ ಬೆಳಕೂಡ, ಪ್ರಭು ಕಡಾಡಿ, ಬಸಪ್ಪ ಯಾದಗೂಡ, ಬಸು ಸೊಂಟನವರ, ಈರಣ್ಣಾ ಮುನ್ನೋಳಿಮಠ, ನಾರಾಯಣ ಪತ್ತಾರ, ಸೈಯ್ಯದ ನದಾಫ, ರಾಮಸಿದ್ಧ ನಾವಿ, ಬಸು ಕಂಕಣವಾಡಿ, ಬಸು ಭಜಂತ್ರಿ, ನ್ಯಾಯವಾದಿಗಳಾದ ಚನ್ನಪ್ಪ ಹುಕ್ಕೇರಿ, ಶಂಕರ ಗೋರೋಶಿ, ಹನಮಂತ ಸಂಗಟಿ, ಪಂಚಪ್ಪ ಹೆಬ್ಬಾಳ, ಮಲ್ಲು ಕಡಾಡಿ, ಮುಂತಾದವರು ಉಪಸ್ಥಿತರಿದ್ದರು.

Home add -Advt

ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡುವಂತೆ ಆಗ್ರಹಿಸಿ ರವಿವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕಲ್ಲೋಳಿ ಪಟ್ಟಣದ ನಾಗರೀಕರು ಮನವಿ ಸಲ್ಲಿಸಿದರು.

Related Articles

Back to top button