Latest
ತಮಿಳುನಾಡಿನಲ್ಲಿ ಹಿಂದಿ ಹೇರಿದರೆ ದೆಹಲಿಯಲ್ಲಿ ಪ್ರತಿಭಟನೆ; ಡಿಎಂಕೆ ಎಚ್ಚರಿಕೆ
October 16, 2022
Less than a minute

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ತಮಿಳುನಾಡಿನಲ್ಲಿ ಹಿಂದಿ ಹೇರಿದರೆ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಪ್ರತಿಭಟನೆ ನಡೆಸುವುದಾಗಿ ಡಿಎಂಕೆ ಎಚ್ಚರಿಕೆ ನೀಡಿದೆ.
ಈ ಕುರಿತು ಡಿಎಂಕೆ ಶಾಸಕ ಮತ್ತು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಎಚ್ಚರಿಸಿದ್ದಾರೆ.
ಹಿಂದಿ ಹೇರಿಕೆ ವಿರೋಧಿಸಿ ಶನಿವಾರ ತಮಿಳುನಾಡಿನಲ್ಲಿ ಡಿಎಂಕೆ ಪ್ರತಿಭಟನೆ ನಡೆಸಿತ್ತು. ಈ ವೇಳೆ ಮಾತನಾಡಿದ ಉದಯನಿಧಿ ಹಿಂದಿ ಹೇರಿಕೆಯ ವಿರೋಧ ಒಂದು ದಿನದ ಪ್ರತಿಭಟನೆ ಮತ್ತು ಘೋಷಣೆಗಳನ್ನುಕೂಗುವ ಮೂಲಕ ಕೊನೆಗೊಳ್ಳುವುದಿಲ್ಲ. ಸರಕಾರ ಅಂಥ ಸಾಹಸಕ್ಕೆ ಕೈ ಹಾಕಿದರೆ ತೀವ್ರ ಹೋರಾಟದ ಬಿಸಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Related Articles
Tags
attack Congress candidate D.K.Shivakumar Havyaka habba Pragativahini News santosh lad Vidhanaparishath election ಕನ್ನಡ ಸುದ್ದಿ ಪ್ರಗತಿವಾಹಿನಿ ನ್ಯೂಸ್
URL Copied




