ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಇಂಡಿಯನ್ ಕರಾಟೆ ಕ್ಲಬ್ ವತಿಯಿಂದ ಅತ್ಯಾಚಾರ ಮತ್ತು ಅಪಹರಣ ಸಂಧರ್ಭದಲ್ಲಿ ಸ್ವಯಂ ರಕ್ಷಣೆ ಕುರಿತು ಜಾಗೃತಿ ಪ್ರಾತ್ಯಕ್ಷಿಕೆ ನೀಡಲಾಗಿದ್ದು ಸಾವಿರಾರು ಜನರ ಮೆಚ್ಛುಗೆಗೆ ಪಾತ್ರವಾಯಿತು.
ರಾಜ್ಯೋತ್ಸವದ ದಿನ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಕ್ಕಳ ಅಣುಕು ಪ್ರದರ್ಶನವನ್ನು ನೋಡಿದ ಜನ ಮಕ್ಕಳ ನೈಜ ಅಭಿನಯ ನೋಡಿ ಪುಳಕಿತರಾದರು. ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮಾಸ್ಟರ್ ಗಜೇಂದ್ರ ಕಾಕತಿಕರ ಮತ್ತು ತರಬೇತುದಾರ ವಿಠ್ಡಲ ಬೋಜಗಾರ ಅವರ ಮಾರ್ಗದರ್ಶನದಲ್ಲಿ ಬ್ಲಾಕ್ ಬೆಲ್ಟ ಪ್ರಮಾದ ಈಳಿಗೇರ ,ದೀಪಕ ಚಂದಗಡಕರ ಮತ್ತು ಮನೀಶ ನೇಸರಕರ ಮಕ್ಕಳಿಗೆ ತರಬೇತಿ ನೀಡಿದರು.
ಜಯಕುಮಾರ ಮಿಶ್ರಾ, ರಿಷಿಕೇಶ ಚಲವಾದಿ, ಓಂಕಾರ ಸೋಮಣ್ಣವರ, ಪುನೀತ ಬಿರಾದಾರ, ಕಲಗೌಡ ಪಾಟೀಲ, ಶ್ರೀಶೈಲ ಕುಲಕರ್ಣಿ
ಸುದೀಪ ಮರೆಪ್ಪನವರ, ಅರುಣಾ ಬೀಳಗಿ ,ವಚನಾ ದೇಸಾಯಿ ಮತ್ತು ದಿವ್ಯಾನಿ ಪಾಟೀಲ ಪ್ರ್ತಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.
ಹೆಣ್ಣು ಹೆತ್ತವರಲ್ಲಿ ಆತಂಕ ಮೋಡಿಸುವ ಘಟನೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಹೆಣ್ಣು ತನ್ನೊಂದಿಗೆ ಇತರರನ್ನೂ ರಕ್ಷಿಸಬಲ್ಲಳು ಎನ್ನುವ ಸಂದೇಶ ಮೆಚ್ಚುಗೆಗೆ ಪಾತ್ರವಾಯಿತು.
ಬಹಿರ್ದೆಸೆಗೆ ಹೋಗಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ
https://pragati.taskdun.com/latest/miner-girlrapemurderkalaburgidead-body-found/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ