
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಯುವತಿ ಯುವಕನನ್ನು ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.
ಮೊಬೈಲ್ ಚಾಟಿಂಗ್ ಮೂಲಕ ದಿಲೀಪ್ ಎಂಬಾತನಿಗೆ ಪರಿಚಯವಾದ ಪ್ರಿಯಾ ಎಂಬ ಯುವತಿ ಮನೆಯಲ್ಲಿ ಯಾರೂ ಇಲ್ಲ ಎಂದು ಹೇಳಿ ಆತನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮನೆಗೆ ಬಂದು ನೋಡಿದಾಗ ಯುವಕನಿಗೆ ಶಾಕ್ ಕಾದಿತ್ತು. ಯುವತಿಯೊಂದಿಗೆ ನಾಲ್ವರು ಯುವಕರು ಸೇರಿಕೊಂಡಿದ್ದು, ದಿಲೀಪ್ ನನ್ನು ಖೆಡ್ಡಾಗೆ ಕೆಡವಿದ್ದಾರೆ.
ಯುವತಿಯೊಂದಿಗೆ ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ಮೊಮೈಲ್, ಪರ್ಸ್, ಕಾರ್ ಕೀ ಗಳನ್ನು ಕಸಿದುಕೊಂದಿದದರೆ. 25 ಸಾವಿರ ರೂಪಾಯಿ ತಕ್ಷಣ ಪೇ ಮಾಡಬೇಕು ಇಲ್ಲವಾದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ.
ಅಲ್ಲದೇ ಕಾರ್ ಕೀ ಬೇಕೆಂದರೆ 60 ಸಾವಿರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಯುವತಿಯ ಮಾತಿಗೆ ಮರುಳಾಗಿ ಖೆಡ್ಡಾಗೆ ಬಿದ್ದಿದ್ದು ಗೊತ್ತಾಗುತ್ತಿದ್ದಂತೆ ಅಲ್ಲಿಂದ ಕಷ್ಟಪಟ್ತು ಹೊರ ಬಂದಿದ್ದಾನೆ. ಬಳಿಕ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯನ್ನು ಬಂಧಿಸಿದ್ದು, ಇನ್ನು ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಮತ್ತೆ ಹೆಣ್ಣು ಮಗು ಹುಟ್ಟಿತೆಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
https://pragati.taskdun.com/latest/mansuicidekolara/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ