
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಈಗಾಗಲೇ ಘೋಷಣೆಯಾದಂತೆ ದಸರಾ ಹೊತ್ತಿಗೆ ಬೆಂಗಳೂರು- ಮೈಸೂರು ದಶಪಥ ಜನ ಬಳಕೆಗೆ ಸಂಪೂರ್ಣ ಮುಕ್ತವಾಗಬೇಕಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳದೇ ವಿಳಂಬವಾಗಿದೆ.
ಈಗಾಗಲೇ ಬೆಂಗಳೂರಿನಿಂದ ಮದ್ದೂರುವರೆಗೆ ಬಹುತೇಕ ಕೆಲಸ ಮುಗಿದು ಸಂಚಾರಕ್ಕೆ ಲಭ್ಯವಿದ್ದರೂ ಮದ್ದೂರಿನಿಂದ ಮೈಸೂರುವರೆಗಿನ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ಕೋವಿಡ್ ಸಹಿತ ಹಲವು ಕಾರಣಗಳಿಂದ ಇನ್ನೂ ಮುಗಿದಿಲ್ಲ. ಹೊಸ ವರ್ಷಕ್ಕೆ ಸಂಪೂರ್ಣವಾಗಬಹುದು ಎನ್ನುವ ಹೊಸ ಹೇಳಿಕೆಗಳು ಬಂದರೂ ಸದ್ಯದ ಪರಿಸ್ಥಿತಿ ನೋಡಿದರೆ ಹೊಸ ವರ್ಷದಲ್ಲೂ ಇದು ಸಂಪೂರ್ಣ ಸಿಗುವ ಸಾಧ್ಯತೆ ಕಡಿಮೆ. ಇದಕ್ಕಾಗಿ ಇನ್ನೂ ಮೂರ್ನಾಲ್ಕು ತಿಂಗಳು ಕಾಯಲೇಬೇಕು.
ಇನ್ನೂ ಏನೇನು ಕೆಲಸವಾಗಬೇಕು:
೨೦೧೯ರಲ್ಲಿ ಈ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು, ಹಲವಾರು ತೊಡಕುಗಳನ್ನು ನಿವಾರಿಸಿಕೊಂಡು ನಿಧಾನವಾಗಿ ಪೂರ್ಣಗೊಳ್ಳುತ್ತಿದೆ. ಈ ರಸ್ತೆ ಸಂಚಾರಕ್ಕೆ ಮುಕ್ತವಾದರೆ, ಮೈಸೂರು- ಬೆಂಗಳೂರು ನಡುವೆ ಪ್ರಾಯಾಣದ ಸಮಯ ತೀರಾ ಕಡಿಮೆಯಾಗಲಿದೆ. ಪ್ರಸ್ತುತ ಈ ರಸ್ತೆಯಲ್ಲಿ ಉಭಯ ನಗರಗಳ ನಡುವೆ ೩ರಿಂದ ೪ ಗಂಟೆ ಅವಧಿ ಇದೆ. ನೂತನ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ದೊರೆತರೆ ಈ ಅವಧಿ ೭೫ರಿಂದ ೮೦ ನಿಮಿಷಗಳಿಗೆ ಇಳಿಕೆಯಾಗಲಿದೆ. ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಲೇ ಇದೆ. ಈ ಕಾಮಗಾರಿ ಆರಂಭವಾದಾಗ ತೆರವುಗೊಳಿಸಲಾದ ರಸ್ತೆಬದಿ ವ್ಯಾಪಾರಿಗಳ ಬದುಕು ಕೂಡ ಕುಂಟುತ್ತಿದೆ. ನವೆಂಬರ್ ಅಂತ್ಯಕ್ಕೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದ್ದು, ಡಿಸೆಂಬರ್ ವೇಳೆಗೆ ಮಂಡ್ಯ- ಶೀರಂಗಪಟ್ಟಣ ಬೈಪಾಸ್ ಕಾಮಗಾರಿ ಕೂಡ ಪೂರ್ಣಗೊಳ್ಳಲಿದ್ದು, ಹೊಸ ವರ್ಷದ ಹೊತ್ತಿಗೆ ದಶಪಥ ರಸ್ತೆ ಸಾರ್ವಜನಿಕ ಸೇವೆ ಮುಕ್ತವಾಗಬಹುದು ಎನ್ನುವ ಲೆಕ್ಕಾಚಾರವಿದೆ.
‘ ಮದ್ದೂರು,ಮಂಡ್ಯ ಬಳಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದೆ.ಅದನ್ನು ಮುಗಿಸಲು ಕಾಮಗಾರಿ ನಡೆಯುತ್ತಿರುವ ಕಾರಣ ಡಿಸೆಂಬರ್ ಎರಡನೇ ವಾರದೊಳಗೆ ಬೈಪಾಸ್ ಮೂಲಕ ಮೈಸೂರು-ಬೆಂಗಳೂರಿಗೆ ತೆರಳುವವರು ಸಂಚರಿಸಲು ಯಾವ ಸಮಸ್ಯೆ ಇಲ್ಲ.
ಬೂದನೂರು, ಇಂಡುವಾಳು,ಹನಕೆರೆ ಬಳಿ ಸರ್ವಿಸ್ ಲೈನ್ ಕಾಮಗಾರಿ ನಡೆಯುವ ಜತೆಗೆ ಅಂಡರ್‌ಪಾಸ್, ಕನ್ವರ್ಟ್ ಮುಗಿದ ಬಳಿಕ ಅಲ್ಲಿಯೂ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಈ ಯೋಜನೆ ಜಾರಿಗೆ ಮುತುವರ್ಜಿ ವಹಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ಬನಾರಸ್ ಪೇಟ ಸಿದ್ಧ
https://pragati.taskdun.com/politics/pm-narendra-modibanaras-petamysorenandan-singh/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ