Latest

ಮತ್ತೆ ಕೊರೊನಾ ಅಟ್ಟಹಾಸ; ಲಾಕ್ ಡೌನ್ ಜಾರಿ

ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೊನಾ ಸೋಂಕಿನ ಅಟ್ಟಹಾಸ ಆರಂಭವಾಗಿದ್ದು, ಇಡೀ ಜಗತ್ತಿಗೆ ಮತ್ತೆ ಆತಂಕ ಎದುರಾಗಿದೆ. ವಿಶ್ವದ ಆರ್ಥಿಕತೆಯ ಎರಡನೇ ನಗರ ಎಂಬ ಖ್ಯಾತಿ ಪಡೆದಿರುವ ಚೀನಾದ ಗುವಾಂಗ್ ಜೌ ಮಹಾನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.

ಅಟ್ಟಹಾಸ ಆರಂಭವಾಗಿದೆ. ಚೀನಾದ ಪ್ರಮುಖ ಮಹಾನಗರ ಗುವಾಂಗ್ ಜೌ ನಲ್ಲಿ ಕೊರೊನಾ ಸೋಂಕಿಗೆ ಜನರು ತತ್ತರಿಸಿ ಹೋಗಿದ್ದಾರೆ.

ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುವ ಗುವಾಂಗ್ ಜೌ ನಗರದಲ್ಲಿ ಕಳೆದ 6 ತಿಂಗಳಿಂದ ಅತಿ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿವೆ. ಪ್ರತಿ ದಿನ 3000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ.

ಕಳೆದ 24 ಗಂಟೆಯಲ್ಲಿ 2500 ಜನರಲ್ಲಿ ಹೊಸದಾಗಿ ಸೋಂಕು ಪತೆಯಾಗಿದ್ದು, ಮುಂಜಾಗೃತಾ ಕ್ರಮವಾಗಿ ಗುವಾಂಗ್ ಜೌ ನಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ.

ಮುರುಘಾಮಠದಲ್ಲಿ ಫೋಟೋ ಕಳುವು ಪ್ರಕರಣ; ಮಾಜಿ ಆಡಳಿತಾಧಿಕಾರಿ ಸೇರಿ ಇಬ್ಬರು ವಶಕ್ಕೆ

https://pragati.taskdun.com/latest/murughamatha-photo-theft-casebasavarajanarrest/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button