Latest

ಉತ್ತರ ಕರ್ನಾಟಕದ 205 ಕೆಜಿ ಉಳ್ಳಾಗಡ್ಡೆಗೆ ಬೆಂಗಳೂರಿನಲ್ಲಿ ಸಿಕ್ಕಿತು 8 ರೂ. !

ಪ್ರಗತಿವಾಹಿನಿ ಸುದ್ದಿ, ಗದಗ: ತಾನು ಬೆಳೆದ ಈರುಳ್ಳಿಯನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲು ಗದುಗಿನಿಂದ 415 ಕಿ.ಮೀ. ಪ್ರಯಾಣಿಸಿ ಹೋದ ಇಲ್ಲಿನ ರೈತರೊಬ್ಬರಿಗೆ ಬೆಂಗಳೂರಿನಲ್ಲಿ 205 ಕೆಜಿಗೆ 8 ರೂ. ಕೊಟ್ಟು ಕಳಿಸಲಾಗಿದೆ !

ಗದಗನ ಪವಡೆಪ್ಪ ಹುಕ್ಕೇರಿ ಎಂಬುವವರೇ ಸಗಟು ವ್ಯಾಪಾರಿಯ ಈ ಜಾದೂಮಯ ಲೆಕ್ಕಕ್ಕೆ ಸಿಲುಕಿ ಕೈಸುಟ್ಟುಕೊಂಡ ರೈತ.

ಸಗಟು ವ್ಯಾಪಾರಿ ಪ್ರತಿ ಕ್ವಿಂಟಲ್‌ಗೆ 200 ರೂ. ದರ ನಿಗದಿಪಡಿಸಿ, ಸರಕು ಸಾಗಣೆ ಶುಲ್ಕಕ್ಕೆ 377ರೂ. ಮತ್ತು ಹಮಾಲಿ ಶುಲ್ಕಕ್ಕೆ 24 ರೂ. ಕಡಿತಗೊಳಿಸಿ ಒಟ್ಟು  8.36 ರೂ. ಅಂತಿಮ ದರ ನೀಡಿದ್ದಾನೆ.

ಬೆಳೆ ಬೆಳೆದು ಮಾರುಕಟ್ಟೆಗೆ ಸಾಗಿಸಲು ರೈತ 25 ಸಾವಿರ ರೂ.ಗೂ  ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ ಸಗಟು ವ್ಯಾಪಾರಿಯ ಒಗಟಿನ ಲೆಕ್ಕಕ್ಕೆ ಸಿಲುಕಿ ರೈತಾಪಿ ಕೆಲಸದ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಿಗೆ ಖಿನ್ನರಾಗಿದ್ದಾರೆ.

ಉತ್ತರ ಕರ್ನಾಟಕ ಜಿಲ್ಲೆಯ ರೈತರು ಈಗ ತಮ್ಮ ಇಳುವರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಲು ಒತ್ತಾಯಿಸಿ ಸರಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಮುಂದಾಗಿದ್ದಾರೆ.

ಗದಗದಲ್ಲಿ ಈ ವರ್ಷ ಎಡೆಬಿಡದೆ ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ.

ಮಹಾರಾಷ್ಟ್ರದ ಸಚಿವರಿಗೆ ಬೆಳಗಾವಿ ಪ್ರವೇಶಿಸಲು ಬಿಡಬೇಡಿ; ಕರವೇ ಮನವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button