ಮಹಾರಾಷ್ಟ್ರ ಸಚಿವರು ರಾಜ್ಯ ಪ್ರವೇಶಿಸಲು ಬಿಡುವುದಿಲ್ಲ; ಜಿಲ್ಲಾಡಳಿತಕ್ಕೆ ಕಟ್ಟೆಚ್ಚರಕ್ಕೆ ಸೂಚನೆ; ಆರ್.ಅಶೋಕ್
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬೆನ್ನಲ್ಲೇ ನಾಳೆ ಮಹಾರಾಷ್ಟ್ರದ ಇಬ್ಬರು ಸಚಿವರು ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಯಾವುದೇ ರೀತಿ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಇದೆಲ್ಲ ಎಲೆಕ್ಷನ್ ಸ್ಟಂಟ್. ಅದಕ್ಕೆ ಯಾರೂ ಬೆಲೆ ಕೊಡಬೇಕಿಲ್ಲ. ಮಹಾರಾಷ್ಟ್ರದಿಂದ ಬರುವ ಸಚಿವರು ಸ್ಟಂಟ್ ಮಾಸ್ಟರ್ಸ್. ಸವಾಲಿಗೆ ಪ್ರತಿ ಸವಾಲು ಎನ್ನುವುದಾದರೆ ನಾವೂ ಸಿದ್ಧ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸಂಪುಟದ ಇಬ್ಬರು ಸಚಿವರು ನಾಳೆ ಬೆಳಗಾವಿಗೆ ಆಗಮಿಸಲು ನಿರ್ಧರಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರು ರಾಜ್ಯಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಶಿವಸೇನೆ ಒಂದು ನಾಟಕ ಕಂಪನಿ ಹಾಗಾಗಿ ಆಗಾಗ ಈ ರೀತಿ ನಾಟಕಗಳನ್ನು ಮಾಡುತ್ತಲೇ ಇರುತ್ತದೆ. ಮಹಾರಾಷ್ಟ್ರದಲ್ಲಿ ಎಂಇಎಸ್ ವರ್ಚಸ್ಸು ಕಡಿಮೆಯಾಗುತ್ತಿದ್ದಂತೆ ಅವರಿಗೆ ಇವೆಂಟ್ ಇಲ್ಲದಿದ್ದಾಗ ಗಡಿ ಕ್ಯಾತೆ ತೆಗೆಯುತ್ತಾರೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಸುಪ್ರೀಂ ಕೋರ್ಟ್ ನಲ್ಲಿ ಸ್ಪಷ್ಟವಾಗಿದೆ. ದಾಖಲೆಗಳು, ಜನಾಭಿಪ್ರಯ ಎಲ್ಲವೂ ನಮ್ಮ ಕಡೆಯೇ ಇದೆ. ಯಾವ ಕಾರಣಕ್ಕೂ ಮಹಾ ಸಚಿವರು ಬೆಳಗಾವಿ ಪ್ರವೇಶಿಸಲು ಬಿಡುವ ಮಾತಿಲ್ಲ. ನಮ್ಮ ನಾಡು ಭಾಷೆ, ನೆಲ, ಜನ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಮಗನನ್ನೇ ಸುಪಾರಿಕೊಟ್ಟು ಕೊಲ್ಲಿಸಿದ ಉದ್ಯಮಿ ತಂದೆ
https://pragati.taskdun.com/hublibussinesmanmurdersonhublibharath-jainakhil-jain/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ