Latest

ಅಥಣಿ ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೇರಿಸುವಂತೆ ಒತ್ತಾಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಥಣಿ ಪಟ್ಟಣದ ವ್ಯಾಪ್ತಿ ಹಾಗೂ ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದರಿಂದ ಪುರಸಭೆಯಿಂದ ನಗರ ಸಭೆಗೆ ಮೇಲ್ದರ್ಜೆಗೆರಿಸಬೇಕು ಎಂದು ಅಥಣಿ ಪುರಸಭಾ ಸರ್ವ ಸದಸ್ಯರು ಮಾಜಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಇವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಅಥಣಿ ಪಟ್ಟಣದ ಜನಸಂಖ್ಯೆ 2011 ರಲ್ಲಿಯೇ 40 ಸಾವಿರ ದಾಟಿತ್ತು. ಈಗ ಅಂದಾಜು 70 ಸಾವಿರದಷ್ಟು ಜನಸಂಖ್ಯೆ ಬೆಳೆದಿದ್ದು, ಈಗಿದ್ದ ಪುರಸಭೆಯ ಅನುದಾನದಲ್ಲಿ ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ ಮೂಲಭೂತ ಸೌಲಭ್ಯಗಳನ್ನು, ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಪುರಸಭೆಯಿಂದ ನಗರ ಸಭೆಗೆ ಮೇಲ್ದರ್ಜೆಗೆರಿದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ಪುರಸಭಾ ಸದಸ್ಯರು ಉಲ್ಲೇಖಿಸಿದ್ದಾರೆ.

ಅಥಣಿ ಪುರಸಭೆ 1853 ರಲ್ಲಿ ಮಹಾರಾಷ್ಟ್ರ ದ ಪುಣೆಯ ಪುರಸಭೆಯೊಂದಿಗೆ ಪ್ರಾರಂಭಗೊಂಡಿದ್ದರೂ ಕೂಡ ಅಥಣಿ 169 ವರ್ಷಗಳಿಂದಲೂ ಪುರಸಭೆಯಾಗಿಯೇ ಉಳಿದುಕೊಂಡಿದ್ದರೆ ಪುಣೆ ಪುರಸಭೆಯಿಂದ ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೆ ಏರಿದ್ದು, ನಗರ ಸಭೆ ಹೊಂದಲು ಎಲ್ಲ ಅರ್ಹತೆ ಹೊಂದಿರುವ ಅಥಣಿ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಬೆಳಗಾವಿಯ ಚಳಿಗಾಲದ ಅಧಿವೇಶನ ದಲ್ಲಿ ಸಲ್ಲಿಸಬೇಕು ಎಂದು ಪುರಸಭೆಯ 27 ಸದಸ್ಯರು ಪಕ್ಷಾತೀತವಾಗಿ ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ನಗರ ಸಭೆಯಾಗಲು ಎಲ್ಲ ಅರ್ಹತೆ ಹೊಂದಿರುವ ಅಥಣಿ ಪುರಸಭೆಯನ್ನು ಮೇಲ್ದರ್ಜೆಗೇರಿಸುವ ಪುರಸಭಾ ಸದಸ್ಯರ ಮನವಿಯನ್ನು ಅಧಿವೇಶನ ದಲ್ಲಿ ಪ್ರಸ್ತಾಪಿಸುವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ದಿಲೀಪ ಲೋಣಾರೆ, ಮಲ್ಲೇಶ ಹುದ್ದಾರ, ಸಂತೋಷ ಸಾವಡಕರ, ದತ್ತಾ ವಾಸ್ಟರ್, ಪ್ರಮೋದ ಬಿಳ್ಳೂರ, ರಾಜಶೇಖರ ಗುಡೋಡಗಿ, ಮೃಣಾಲಿನಿ ದೇಶಪಾಂಡೆ, ಆಸೀಫ್ ತಾಂಬೋಳಿ, ರಾಜು ಬುಲಬುಲೆ, ಬಸವರಾಜ ಪಾಟೀಲ, ತಿಪ್ಪಣ್ಣ ಭಜಂತ್ರಿ ಸೇರಿದಂತೆ ಪುರಸಭೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಇದು ಚುನಾವಣೆ ಗಿಮಿಕ್ ಅಲ್ಲ; ಖಡಕ್ ಉತ್ತರ ಕೊಟ್ಟ ಸಿಎಂ

https://pragati.taskdun.com/karnataka-maharastra-border-issuecm-basavaraj-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button