Latest

ದೇಶದ 50 ನಗರಗಳಲ್ಲಿ 5G ಸೇವೆ ಆರಂಭ

 ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: 14 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ  50 ನಗರಗಳಲ್ಲಿ 5G ಸೇವೆಗಳು ಪ್ರಾರಂಭವಾಗಿವೆ.

ಈ ಕುರಿತು ಸರಕಾರ ಬುಧವಾರ ಲೋಕಸಭೆಗೆ ತಿಳಿಸಿದೆ. 5G ಸೇವೆಗಳು ಪ್ರಾರಂಭವಾಗಿರುವ 50 ನಗರಗಳಲ್ಲಿ 33 ನಗರಗಳು ಗುಜರಾತ್‌ನಲ್ಲಿವೆ.

ಪಟ್ಟಿಯಲ್ಲಿ ಮಹಾರಾಷ್ಟ್ರದ ಮೂರು ಪಟ್ಟಣಗಳು ಮತ್ತು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ತಲಾ ಎರಡು ಪಟ್ಟಣಗಳು ಸೇರಿವೆ. ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ಕೂಡ ಈ ಸೇವೆ ಹೊಂದಿದೆ.

ಸೇವೆಗಳನ್ನು ಪಡೆದ ನಗರಗಳ ವಿವರ ರಾಜ್ಯ, ಕೇಂದ್ರಾಡಳಿತ ಪ್ರದೇಶವಾರು ಇಂತಿದೆ:

ಪಶ್ಚಿಮ ಬಂಗಾಳ: ಕೋಲ್ಕೊತ್ತಾ, ಸಿಲಿಗುರಿ

ಉತ್ತರ ಪ್ರದೇಶ: ವಾರಣಾಸಿ, ಲಕ್ನೋ

ತಮಿಳುನಾಡು: ಚೆನ್ನೈ

ಕರ್ನಾಟಕ: ಬೆಂಗಳೂರು

ತೆಲಂಗಾಣ: ಹೈದರಾಬಾದ್

ರಾಜಸ್ಥಾನ: ಜೈಪುರ

ಹರ್ಯಾಣಾ: ಪಾಣಿಪತ್

ಆಸ್ಸಾಂ: ಗೌಹಾಟಿ

ಕೇರಳ: ಕೊಚ್ಚಿ

ಬಿಹಾರ: ಪಾಟ್ನಾ

ಆಂಧ್ರ ಪ್ರದೇಶ: ವಿಶಾಖಾಪಟ್ಟಣಂ

ಗುಜರಾತ್: ಅಹಮದಾಬಾದ್, ಗಾಂಧಿನಗರ, ಭಾವನಗರ, ಮೆಹಸಾನಾ, ರಾಜಕೋಟ್, ಸೂರತ್, ವಡೋದರಾ, ಅಮ್ರೇಲಿ, ಬೋತಾಡ್, ಜುನಾಗಡ, ಪೋರಬಂದರ್, ವೇರಾವಳ, ಹಿಮತ್ ನಗರ, ಮೋಡಸಾ, ಪಾಲನಪುರ, ಪಾಟನ್, ಬುಝ್, ಜಾಮನಗರ, ಖಂಭಾಲಿಯಾ, ಮೋರ್ವಿ, ವಾಧ್ವಾನ್, ಆಹ್ವಾ, ಭರೂಚ್, ನವಸಾರಿ, ರಾಜಪಿಪ್ಲಾ, ವಲ್ಸಾದ್, ವ್ಯಾರಾ, ಆನಂದ, ಛೋಟಾ ಉದಯಪುರ, ದೋಹಾಡ್, ಗೋಧ್ರಾ, ಲೂನಾವಾಡಾ, ನಾಡಿಯಾದ್.

ಗರ್ಭಿಣಿ ಎಂಬುದೇ ಗೊತ್ತಿಲ್ಲದೆ ವಿಮಾನದ ಶೌಚಾಲಯದಲ್ಲಿ ಹೆರಿಗೆಯಾದ ಮಹಿಳೆ

https://pragati.taskdun.com/a-woman-gave-birth-in-an-airplane-toilet-without-knowing-she-was-pregnant/

ಎಚ್ಚರವಿರಲಿ, ಮಹಾಜನ್ ವರದಿ ಜಾರಿಯಾದರೆ ಲಾಭ ಮಹಾರಾಷ್ಟ್ರಕ್ಕೇ! ನಾವು ಏನೇನು ಕಳೆದುಕೊಳ್ಳುತ್ತೇವೆ ಗೊತ್ತೇ?

https://pragati.taskdun.com/implimentation-of-mahajan-commission-report-is-profitable-for-maharashtra-only/

*ಮತ್ತೊಂದು ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು*

https://pragati.taskdun.com/cantercaraccident4-people-deathtumakur/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button