Kannada NewsLatestUncategorized

*ಸುವರ್ಣವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ ಧರಣಿ; ಅಧಿವೇಶನ ಆರಂಭಕ್ಕೂ ಮೊದಲೇ ಸಾವರ್ಕರ್ ಭಾವಚಿತ್ರ ಸಮರ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಸುವರ್ಣವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿರುವುದನ್ನು ವಿರೋಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಧರಣಿ ನಡೆಸಿದ್ದಾರೆ.

Home add -Advt

ಅಧಿವೇಶನ ಆರಂಭಕ್ಕೂ ಮುನ್ನ ಸುವರ್ಣವಿಧಾನಸೌಧದ ಒಳಗೆ ಬಸವಣ್ಣ, ವೀರ ಸಾರ್ವಕರ್, ಅಂಬೆಡ್ಕರ್ ಸೇರಿದಂತೆ ಹಲವು ಮಹನಿಯರ ಭಾವಚಿತ್ರವನ್ನು ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಸಾವರ್ಕರ್ ಭಾವಚಿತ್ರವನ್ನು ವಿಧಾನಸೌಧದ ಒಳಗೆ ಅನಾವರಣ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸಿದೆ.

ಸುವರ್ಣವಿಧಾನಸೌಧದ ಮುಖ್ಯದ್ವಾರದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾವರ್ಕರ್ ಫೋಟೋ ಯಾಕೆ ಹಾಕಿದ್ದು ಎಂದು ಪ್ರಶ್ನಿಸಬೇಡಿ. ನಾವು ಸೂಚಿಸಿದ್ದ ದಾರ್ಶನಿಕರ ಫೋಟೋ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. ಅಲ್ಲದೇ ಸಮಾಜ ಸುಧಾರಣೆಗೆ ಶ್ರಮಿಸಿದ ಮಹನೀಯರ ಫೋಟೋ ಅಳವಡಿಸಬೇಕು. ಈಗಾಗಲೇ ಈ ನಿಟ್ಟಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಪತ್ರ ಬರೆದಿದ್ದೇನೆ. ಮಹರ್ಷಿ ವಾಲ್ಮೀಕಿ, ಬಸವನ್ನ, ಕನಕದಾಸ, ಶಿಸುನಾಳ ಶರೀಫ, ನೆಹರು, ನಾರಾಯಣಗುರು, ಡಾ.ಬಿ.ಆರ್.ಅಂಬೇಡ್ಕರ್, ವಲ್ಲಭಬಾಯ್ ಪಟೇಲ್, ಬಾಬು ಜಗಜೀವನರಾಮ್, ಕುವೆಂಪು ಭಾವಚಿತ್ರಗಳನ್ನು ಅಳವಡಿಸಿ, ದಾರ್ಶನಿಕರು, ವಿಚಾರವಂತರು ಭಾರತೀಯ ಸಂಸ್ಕೃತಿ ಪರಂಪರೆ ಅಭಿವೃದ್ದಿಗೆ ಅಪಾರಕೊಡುಗೆ ನೀಡಿದ ಮಹನೀಯರ ಭಾವಚಿತ್ರಗಳನ್ನು ಅಳವಡಿಸುವಂತೆ ಹೇಳಿದ್ದೇವೆ. ಆದರೆ ನಾವು ಹೇಳಿದ ದಾರ್ಶನಿಕರ ಭಾವಚಿತ್ರ ಯಾಕೆ ಅಳವಡಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಮಹರ್ಷಿ ವಾಲ್ಮೀಕಿ, ಬಸವಣ್ಣ, ಸಂತ ಶಿಶುನಾಳ ಶರೀಫ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ನೆಹರೂ, ಜಗಜೀವನ ರಾಮ್, ಸರದಾರ ವಲ್ಲಭಬಾಯ್ ಪಟೇಲ್, ಕುವೆಂಪು ಮತ್ತಿತರ ಮಹನೀಯರ ಭಾವಚಿತ್ರ ಹಾಕಬೇಕೆಂದು ಒತ್ತಾಯಿಸಿ, ಈ ಮಹನೀಯರ ಭಿತ್ತಿಚಿತ್ರಗಳನ್ನು ಹಿಡಿದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸತೀಶ್ ಜಾರಕಿಹೊಳಿ, ಹಿರಿಯ ಮುಖಂಡರಾದ ಎಚ್ ಕೆ ಪಾಟೀಲ್, ಕೆ ಜೆ ಜಾರ್ಜ್, ಆರ್ ವಿ ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರ ಮುಖಂಡರು ಬೆಳಗಾವಿ ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಸೋಮವಾರ ಬೆಳಗ್ಗೆ ಪ್ರದರ್ಶನ ನಡೆಸಿದರು.

*ಸುವರ್ಣಸೌಧದಲ್ಲಿ ಬಸವಣ್ಣ, ವೀರ ಸಾವರ್ಕರ್ ಸೇರಿ 7 ಮಹನೀಯರ ಫೋಟೋ ಅನಾವರಣ*

https://pragati.taskdun.com/belagavisuvarnavidhanasoudhasavarkar-photocm-basavaraj-bommaai/

*MES ಮಹಾಮೇಳಾವ್ ಗೆ ಬ್ರೇಕ್; ಪುಂಡಾಟಕ್ಕೆ ಖಾಕಿ ಗುನ್ನಾ*

https://pragati.taskdun.com/belagavimesmahamelavdsp-gadadireaction/

*ಈಶ್ವರಪ್ಪ ಬಹಿಷ್ಕಾರ ಹಾಕಿದ್ರಾ ಬೆಳಗಾವಿ ಅಧಿವೇಶನಕ್ಕೆ?*

https://pragati.taskdun.com/cm-basavaraj-bommaireactionk-s-eshwarappabelagavi/

Related Articles

Back to top button