Latest

ಕರ್ನಾಟಕ ಸರಕಾರದ ವಿರುದ್ಧ ಘೋಷಣೆ ಕೂಗಿದ ಮಹಾ ಶಾಸಕರು: ಗಾಳಿಗೆ ತೂರಿ ಹೋದ ಅಮಿತ್ ಶಾ ಸಲಹೆಗಳು

 

Home add -Advt

ಪ್ರಗತಿವಾಹಿನಿ ಸುದ್ದಿ, ನಾಗ್ಪುರ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆಗಳಿಗೆ ಸವಾಲೊಡ್ಡುವ ರೀತಿಯಲ್ಲಿ ಮಹಾರಾಷ್ಟ್ರಶಾಸಕರು ವರ್ತಿಸಿದ್ದಾರೆ.

ನಾಗ್ಪುರದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ವೇಳೆ ಬ್ಯಾನರ್ ಗಳನ್ನು ಹಿಡಿದ ಶಾಸಕರು ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಇದೇ ಮಾಸಾರಂಭದಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದಿಲ್ಲಿಯಲ್ಲಿ ನಡೆಸಿದ ಸಮಾಲೋಚನೆ ವೇಳೆಗೆ ಉಭಯ ರಾಜ್ಯದವರು ಶಾಂತಿ ಕಾಪಾಡಿಕೊಳ್ಳಲು ಸೂಚಿಸಿದ್ದರಲ್ಲದೆ, ಸುಪ್ರೀಂ ಕೋರ್ಟ್ ನಲ್ಲಿ ವಿವಾದ ಇತ್ಯರ್ಥವಾಗುವವರೆಗೆ ಯಾರೂ ಗಡಿ ವಿಷಯ ಕೆದಕಬಾರದು ಎಂದು ಹೇಳಿದ್ದರು. ಇದಕ್ಕೆ ಸಮ್ಮತಿ ಎಂಬಂತೆ ಮಹಾರಾಷ್ಟ್ರ ಸಿಎಂ, ಡಿಸಿಎಂಗಳು ಸಹ ತಲೆಯಾಡಿಸಿ ಬಂದಿದ್ದರು.

ಇದೀಗ ಮಹಾರಾಷ್ಟ್ರದ ಜನ ಪ್ರತಿನಿಧಿಗಳೇ ಗೃಹಸಚಿವರ ಸಲಹೆ ಸೂಚನೆಗಳನ್ನು ಕವಡೆಕಾಸಿನ ಕಿಮ್ಮತ್ತಿಲ್ಲದಂತೆ ಗಾಳಿಗೆ ತೂರುವ ಮೂಲಕ ಗಡಿ ಕಬಳಿಕೆಯ ಹಪಾಹಪಿತನ  ಬಹಿರಂಗಪಡಿಸುತ್ತಿದ್ದಾರೆ.

ಈ ಮಧ್ಯೆ ಕರ್ನಾಟಕ ಸರಕಾರ, ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡಿಗರು ಶಾ ಸೂಚನೆಗಳಿಗೆ ಬೆಲೆ ನೀಡುವ ಮೂಲಕ ಸಂಯಮ, ಗೌರವಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ. ಕೇಂದ್ರದೆದುರು ಕರ್ನಾಟಕವೇ ಗಡಿ ತಂಟೆ ಆರಂಭಿಸಿದೆ ಎಂದು ಬಿಂಬಿಸಲು ಶತಪ್ರಯತ್ನಗಳನ್ನು ನಡೆಸುತ್ತಲೇ ಇರುವ ಮಹಾರಾಷ್ಟ್ರ ತನ್ನ ಅಸಲಿ ಬಣ್ಣದ ಪ್ರದರ್ಶನ ಮೆರೆದಿದೆ.

*ಮೀಸಲಾತಿ ಹೆಚ್ಚಿಸಿ ಎಂದ ಒಕ್ಕಲಿಗರು; ಏನಂದ್ರು ಸಿಎಂ? *

https://pragati.taskdun.com/okkaligareservationcm-basavaraj-bommaidr-ashwaththanarayana/

ದೇಶದಲ್ಲಿ 3 ತಿಂಗಳೊಳಗೆ ಕೊರೊನಾ ಉಲ್ಬಣ ಸಾಧ್ಯತೆ: ಡಾ. ಸಿ.ಎನ್.ಮಂಜುನಾಥ್ ಎಚ್ಚರಿಕೆ

https://pragati.taskdun.com/dr-c-n-manjunath-warns-that-there-is-a-possibility-of-an-outbreak-of-corona-again-in-the-country-within-a-period-of-three-months/

*ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳ ಪ್ರಾರಂಭಕ್ಕೆ ಚಿಂತನೆ *

https://pragati.taskdun.com/obavva-atmarakshana-kale-karatecm-basavaraj-bommaisuvarnavidhanasoudha/

 

 

Related Articles

Back to top button