Kannada NewsKarnataka News

ಸ್ಫೋಟಕ ಸುದ್ದಿ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ ಪ್ರಧಾನಿ ಮಧ್ಯಸ್ಥಿಕೆ! ಮಹಾರಾಷ್ಟ್ರದ ಉದ್ಧಟತನ ನೋಡಿ

ಉಭಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಭರವಸೆ:  ಧೈರ್ಯಶೀಲ ಮಾನೆ ಮಾಹಿತಿ

 

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಯ ನಂತರವೂ ಉದ್ಧಟತನದ ಹೇಳಿಕೆ ಮತ್ತು ಗಡಿಯೊಳಗೆ ನುಗ್ಗಲು ಯತ್ನಿಸುವ ಮೂಲಕ ಪಂಡಾಟಿಕೆ ನಡೆಸಿದ್ದು ಮಹಾರಾಷ್ಟ್ರ. ಆದರೆ ಅದನ್ನೆಲ್ಲ ತಿರುಚಿ ಪ್ರಧಾನಿ ಬಳಿ ಹೋಗಿ ಕರ್ನಾಟಕದ ಕುರಿತು ದೂರಿದ್ದಾರೆ.  ಇದಕ್ಕೆ ಕರ್ನಾಟಕ ತಕ್ಕ ಪ್ರತ್ಯುತ್ತರ ನೀಡಬೇಕಿದೆ.

ಪ್ರಗತಿವಾಹಿನಿ ಸುದ್ದಿ, ನವದೆಹಲಿ:  ಕಳೆದ ಕೆಲವು ದಿನಗಳಿಂದ ವಿಕೋಪಕ್ಕೆ ಹೋಗಿರುವ ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ಅಂಗಳ ತಲುಪಿದೆ.

ಗಡಿ ಭಾಗದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದಾದ ರೀತಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರೂ ಆಗಿರುವ ಧೈರ್ಯಶೀಲ ಮಾನೆ ಪ್ರಧಾನಿ ಬಳಿ ದೂರು ಒಯ್ದಿದ್ದಾರೆ. ಜೊತೆಗೆ ಪ್ರಧಾನಿಗಳು ಇದನ್ನು ಗಮನಿಸಿ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದ್ದಾರೆ.

ಈ ಕುರಿತು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಶೀಘ್ರವೇ ಚರ್ಚಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಸಂಸದ ಮಾನೆ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಉಭಯ ಮುಖ್ಯಮಂತ್ರಿಗಳನ್ನು ಕರೆದು ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದರು. ಆದರೂ ಕರ್ನಾಟಕದ ಮುಖ್ಯಮಂತ್ರಿಗಳು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದು ಎಂದು ಮಾನೆ ಅವರು ಪ್ರಧಾನಿಯವರಿಗೆ ದೂರಿದರು.

ಬೊಮ್ಮಾಯಿ ಅವರ ವರ್ತನೆಯನ್ನು ಗಮನಿಸಿ, ಕಟ್ಟುನಿಟ್ಟಾಗಿ ಸೂಚನೆ ನೀಡಬೇಕು ಎಂದು ವಿನಂತಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ‘ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ್ದೇನೆ, ಈಗ ಬೊಮ್ಮಾಯಿ ಅವರೊಂದಿಗೂ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು ಎಂದು ಮಾನೆ ತಿಳಿಸಿದ್ದಾರೆ.

ಸ್ಫೋಟಕ ಹೇಳಿಕೆಯಂತೆ!

ಪ್ರಧಾನಮಂತ್ರಿಗಳಿಗೆ ಧೈರ್ಯಶೀಲ ಮಾನೆ ಸಲ್ಲಿಸಿರುವ ಉದ್ಧಟತನದ ಪತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆೆ ನಡೆಸಿ ನೀಡಿದ ಸಲಹೆಗಳು ಕುರಿತು ಸುದೀರ್ಘವಾಗಿ ಪ್ರಧಾನಿಗಳಿಗೆ ವಿವರಿಸಿರುವ ಮಾನೆ, ಇದಾದ ನಂತರವೂ ಕರ್ನಾಟಕದ ಮುಖ್ಯಂತ್ರಿಗಳು ವಿಧಾನಸಭೆಯಲ್ಲಿ, ಕರ್ನಾಟಕದ ಒಂದಿಂಚೂ ಭೂಮಿಯನ್ನೂ ಮಹಾರಾಷ್ಟ್ರಕ್ಕೆ ಬಟ್ಟುಕೊಡುವುದಲ್ಲ ಎನ್ನುವ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಎರಡೂ ರಾಜ್ಯಗಳ ಮಧ್ಯೆ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಪ್ರಸ್ಪರರ ರಾಜ್ಯಗಳಿಗೆ ಸಂಚರಿಸದಂತಹ ಸ್ಥಿತಿ ಉಂಟಾಗಿದೆ ಎಂದು ಮಾನೆ ಪ್ರಧಾನಿಗಳ ಬಳಿ ದೂರಿದ್ದಾರೆ.

ನಾನು ಸಂಸದ ಮತ್ತು ಗಡಿ ಸಮಿತಿಯ ಅಧ್ಯಕ್ಷನಿದ್ದೇನೆ. ಬೆಳಗಾಿಯ ಮಹಾರಾಷ್ಟ್ರ ಏಕೀಕರಣ ಸಮಿತಿ ನನ್ನನ್ನು ಮಹಾಮೇಳಾವಕ್ಕೆ ಆಹ್ವಾನಿಸಿತ್ತು. ಇದಕ್ಕೆ ತೆರಳಲು ನಾನು ಕರ್ನಾಟಕ ಸರಕಾರಕ್ಕೆ ಮಾಹಿತಿ ನೀಡಿ, ಅನುಮತಿ ಕೋರಿದ್ದೆ. ಒಬ್ಬ ಸಂಸದನಾದರೂ ಕಾನೂನು ಸುವ್ಯವಸ್ಥೆ ನೆಪ ಹೇಳಿ ನನಗೆ ಅನುಮತಿ ನಿರಾಕರಿಸುವ ಮೂಲಕ ಅಮಿತ್ ಶಾ ಅವರ ಮಧ್ಯಸ್ಥಿಕೆಯ ಸಭೆಯ ಸೂಚನೆಗಳಿಗೆ ಕರ್ನಾಟಕ ಸರಕಾರ ಅಗೌರವ ತೋರಿಸಿದೆ ಎಂದು ಮಾನೆ ಪ್ರಧಾನಿಗೆ ದೂರಿದ್ದಾರೆ.

ತಾವು ಸೂಕ್ತ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಿ ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸೂಕ್ತ ರೀತಿಯಲ್ಲಿ ಸೂಚನೆ ನೀಡಬೇಕು ಎಂದು ಅವರು ಕೇರಿದ್ದಾರೆ.

ಉದ್ಧಟತನ ತೋರಿದ್ದು ತಾವು, ದೂರಿದ್ದು ಕರ್ನಾಟಕವನ್ನು!

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಯ ನಂತರವೂ ಉದ್ಧಟತನದ ಹೇಳಿಕೆ ಮತ್ತು ಗಡಿಯೊಳಗೆ ನುಗ್ಗಲು ಯತ್ನಿಸುವ ಮೂಲಕ ಪಂಡಾಟಿಕೆ ನಡೆಸಿದ್ದು ಮಹಾರಾಷ್ಟ್ರ. ಆದರೆ ಅದನ್ನೆಲ್ಲ ತಿರುಚಿ ಪ್ರಧಾನಿ ಬಳಿ ಹೋಗಿ ಕರ್ನಾಟಕದ ಕುರಿತು ದೂರಿದ್ದಾರೆ.  ಇದಕ್ಕೆ ಕರ್ನಾಟಕ ತಕ್ಕ ಪ್ರತ್ಯುತ್ತರ ನೀಡಬೇಕಿದೆ.

ಬೆಳಗಾವಿಯಲ್ಲಿ ಒಂದಾದ ಕರವೇ – ಎಂಇಎಸ್ ನಾಯಕರು!

https://pragati.taskdun.com/krv-and-mes-leaders-one-in-belgaum-mes-leaders/

*ಬೆಳಗಾವಿಗೆ ನುಗ್ಗಲು ಯತ್ನ; ಮಹಾ ವಿಕಾಸ ಅಗಾಡಿ ಕಾರ್ಯಕರ್ತರನ್ನು ತಡೆದ ಪೊಲೀಸರು*

https://pragati.taskdun.com/maha-vikasa-agadhiprotestbelagavimes-maha-melav/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button