ಪ್ರಗತಿವಾಹಿನಿ ಸುದ್ದಿ: ಕೊಪ್ಪಳ: ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗಳು ಆರೋಗ್ಯವಂತಳಾಗಲು ಕುಟುಬದವರೇ ಆಕೆಗೆ ದೇವದಾಸಿ ಪಟ್ಟ ಕಟ್ಟಿದ ಘಟನೆ ನಡೆದಿದೆ.
21 ವರ್ಷದ ಯುವತಿಗೆ ಕುಟುಂಬದವರೆಲ್ಲ ಸೇರಿ ದೇವದಾಸಿ ಪಟ್ಟ ಕಟ್ಟಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಯುವತಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಅನಾರೋಗ್ಯದಿಂದ ಮುಕ್ತಿ ಹೊಂದಲು ಆಕೆಯನ್ನು ದೇವದಾಸಿ ಮಾಡಲಾಗಿದೆ.
7 ತಿಂಗಳ ಹಿಂದೆಯೇ ಯುವತಿಯನ್ನು ದೇವಸ್ಥಾನಕ್ಕೆ ಕರೆದೊಯ್ದು ದೇವದಾಸಿ ಪದ್ಧತಿಯ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಮುಖಂಡರು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮುನಿರಾಬಾದ್ ಠಾಣೆಯಲ್ಲಿ 4 ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದ್ದು, ಯುವತಿ ಸಧ್ಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ.
*ಭೀಕರ ಅಗ್ನಿ ದುರಂತ; ಮೂವರು ಮಕ್ಕಳು ಸೇರಿ ಐವರು ಸಜೀವ ದಹನ*
https://pragati.taskdun.com/uttara-pradeshfire-accident5-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ