Karnataka News
ಹೊಸ ವರ್ಷದ ಸಂಭ್ರಮಕ್ಕೆ ಬಂದ ಪ್ರವಾಸಿಗರ ದುರ್ಮರಣ: ಅಪಘಾತದಲ್ಲಿ ನಾಲ್ವರ ಸಾವು

ಪ್ರಗತಿ ವಾಹಿನಿ ಸುದ್ದಿ, ಅಂಕೋಲಾ: ಕೆಎಸ್ಆರ್ಟಿಸಿ ಬಸ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 4 ಜನ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಅಂಕೋಲಾ ಬಳಿಯ ಬಾಳೆಗುಳಿ ಕ್ರಾಸ್ನಲ್ಲಿ ನಡೆದಿದೆ.
ತಮಿಳುನಾಡು ಮೂಲದ ಪ್ರವಾಸಿಗರು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರವಾಸಿಗರು ಗೋವಾದಲ್ಲಿ ಹೊಸ ವಾರ್ಷಾಚರಣೆ ನಡೆಸಿ ಗೋವಾದಿಂದ ಗೋಕರ್ಣಕ್ಕೆ ತೆರಳುತ್ತಿದ್ದರು.
ಅಂಕೋಲಾದ ಮೇಲ್ಸೇತುವೆ ಬಳಿ ಅತಿ ವೇಗವಾಗಿ ಕಾರ್ ಚಲಾಯಿಸಿಕೊಂಡು ಬಂದು ಗೋಕರ್ಣದಿಂದ ಹುಬ್ಬಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಕಾರ್ ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
*ಪ್ರತಿಭಟನೆ ನಡೆಸಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ; ಓರ್ವ ವಿದ್ಯಾರ್ಥಿನಿ ಸಾವು*




