ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೇಂದ್ರ ಸರಕಾರದ ನೋಟು ಅಮಾನ್ಯೀಕರಣ (Demonetisation)ವನ್ನು ಸರ್ವೋಚ್ಛ ನ್ಯಾಯಾಲಯ ಮಾನ್ಯ ಮಾಡಿದೆ.
ಈ ಸಂಬಂಧ ಬಂದಿದ್ದ ನೂರಾರು ತಕರಾರು ಅರ್ಜಿಗಳ ವಿಚಾರಣೆ ನಡೆಸಿ ಸೋಮವಾರ ತೀರ್ಪು ನೀಡಿದೆ.
ನೋಟು ಅಮಾನ್ಯೀಕರಣ ಅಧಿಕಾರ ಕೇಂದ್ರ ಸರಕಾರಕ್ಕಿದೆ ಎಂದು ಸುಪ್ರಿ ಕೋರ್ಟ್, ಈ ಸಂಬಂಧ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎನ್ನುವ ವಾದವನ್ನು ತಳ್ಳಿ ಹಾಕಿದೆ. ಚರ್ಚಿಸಿದ್ದರೆ ಅದರ ಉದ್ದೇಶ ಈಡೇರುತ್ತಿರಲಿಲ್ಲ ಎಂದಿದೆ.
2016ರಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಕೇಂದ್ರದ ನೋಟು ಅಮಾನ್ಯೀಕರಣ ನೀತಿಯನ್ನು ದೃಢಪಡಿಸಿದ ಸುಪ್ರೀಂ ಕೋರ್ಟ್ ನಿರ್ಣಯ ಪ್ರಕ್ರಿಯೆಯಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದೆ.
ಶ್ವಾನ ಗರ್ಭಿಣಿಯಾಗಿದ್ದು ಹೇಗೆ ? ತನಿಖೆಗೆ ಆದೇಶಿಸಿದ ಬಿಎಸ್‍ಎಫ
https://pragati.taskdun.com/bsf-orderd-inquiry-after-sniffer-dog-get-pregnent/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ