Latest

*ಸಚಿವ ವಿ.ಸೋಮಣ್ಣ ಕಾರು ತಡೆದು ಪ್ರತಿಭಟಿಸಿದ ಗ್ರಾಮಸ್ಥರು*

ಪ್ರಗತಿವಾಹಿನಿ ಸುದ್ದಿ; ಹನೂರು : ರಸ್ತೆ ಕಾಮಗಾರಿ ಪ್ರಾರಂಭವಾಗಿ ಎರಡು ಮೂರು ವರ್ಷ ಕಳೆದರೂ ಅಗಲಿಕರಣ ಸಮಯದಲ್ಲಿ ತಮ್ಮ ಸ್ವಂತ ಜಾಗವನ್ನು ಕಳೆದುಕೊಂಡವರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಅಧಿಕಾರಿಗಳು ಸರಿಯಾಗಿ ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ ಹನೂರು ಗ್ರಾಮಸ್ಥರು ವಸತಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿ.ಸೋಮಣ್ಣ ಕಾರು ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ.

ಶಿವರಾತ್ರಿ ಜಾತ್ರೆ ಹಿನ್ನಲೆಯಲ್ಲಿ ಚಾಮರಾಜನಗರದ ಜಿಲ್ಲೆಯ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುತಿದ್ದ ಸಮಯದಲ್ಲಿ ಕಾಮಗೆರೆ ಸಮೀಪದಲ್ಲಿ ಸಚಿವರ ಕಾರು ತಡೆದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು.

ಕೊಳ್ಳೇಗಾಲ ಮತ್ತು ಹನೂರಿನವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಸಲಾಗುತ್ತಿರುವ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು ಇಲ್ಲಿಯ ಜನರಲ್ಲಿ ಕೆಲವರು ಬಾಡಿಗೆದಾರರಾಗಿದ್ದು ಸರ್ಕಾರದಿಂದ ಬರಬೇಕಿದ್ದ ಪರಿಹಾರದ ಹಣ ವಿಳಂಬ ಆಗುತ್ತಿರುವ ಹಿನ್ನೆಲೆ ಹಲವು ಬಾರಿ ಸ್ಥಳೀಯ ಶಾಸಕರು ಹಾಗೂ ನಿಮ್ಮ ಗಮನಕ್ಕೂ ತಂದರು ಸಹ ಯಾವುದೇ ಪ್ರಾಯೋಜನವಾಗಿಲ್ಲ ಎಂದು ಸಚಿವರಿಗೆ ಗ್ರಾಮಸ್ಥರು ತಿಳಿಸಿದರು.

ಈ ವೇಳೆ ಮಾತನಾಡಿದ ಸಚಿವರು ಜೊತೆಯಲ್ಲಿದ್ದ ಸಚಿವರು ಕೊಳ್ಳೇಗಾಲ ಉಪವಿಭಾಗ ಅಧಿಕಾರಿ ಗೀತಾ ಹುಡೇದ್ ರವರಿಗೆ ಈ ವಿಚಾರವಾಗಿ ಸಂಭಂದಿಸಿದ ಎಲ್ಲಾ ಗ್ರಾಮಸ್ಥರಿಗೂ ಕೂಡಲೆ ಸ್ಪಂದಿಸುವಂತೆ ಹಾಗೂ ಪರಿಹಾರದ ಹಣ ಮಂಜೂರು ಮಾಡುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು .

*ರೋಹಿಣಿ ಸಿಂಧೂರಿ-ಶಾಸಕ ಸಾ.ರಾ.ಮಹೇಶ್ ನಡುವೆ ಸಂಧಾನ?*

https://pragati.taskdun.com/rohini-sindhurisa-ra-maheshnegotiation/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button