ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಹೊತ್ತಲ್ಲೇ ಸಾವಿರಾರು ಪಾತಕಿಗಳಿಗೆ ರೌಡಿಶೀಟ್ ನಿಂದ ರಾಜ್ಯ ಸರ್ಕಾರ ಮುಕ್ತಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
7,361 ಪಾತಕಿಗಳನ್ನು ರೌಡಿಪಟ್ಟಿಯಿಂದ ಪೊಲೀಸ್ ಇಲಾಖೆ ಕೈಬಿಟ್ಟಿದೆ. ಕೇವಲ ಒಂದುವರೆ ತಿಂಗಳಲ್ಲಿ ಅಂದರೆ 2023ರವ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ 7,361 ರೌಡಿಗಳ ಹೆಸರನ್ನು ರೌಡಿಪಟ್ಟಿಯಿಂದ ಹಿಂಪಡೆಯಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ.
ಮಂಗಳೂರಿನಲ್ಲಿ 781 ಪಾತಕಿಗಳನ್ನು ರೌಡಿ ಪಟ್ಟಿಯಿಂದ ಪೊಲೀಸರು ಕೈಬಿಟ್ಟಿದ್ದಾರೆ. ಮಂಡ್ಯದಲ್ಲಿ 610, ಉತ್ತರ ಕನ್ನಡದಲ್ಲಿ 529, ಬೀದರ್ 519, ಬೆಂಗಳೂರಿನಲ್ಲಿ 17 ಸೇರಿದಂತೆ ಒಟ್ಟು 7361 ರೌಡಿಗಳನ್ನು ರೌಡಿಶೀಟ್ ನಿಂದ ಕೈಬಿಡಲಾಗಿದೆ.
*ರೋಹಿಣಿ ಸಿಂಧೂರಿ-ಶಾಸಕ ಸಾ.ರಾ.ಮಹೇಶ್ ನಡುವೆ ಸಂಧಾನ?*
https://pragati.taskdun.com/rohini-sindhurisa-ra-maheshnegotiation/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ