Latest

*ರಷ್ಯಾಕ್ಕೆ ಬೆಂಬಲಿಸಿದರೆ ಖಂಡಿತ ನಿರ್ಭಂಧ*

ಪ್ರಗತಿವಾಹಿನಿ ಸುದ್ದಿ; ಜರ್ಮನಿ: ಕಳೆದ ಹಲವು ತಿಂಗಳಿಂದ ರಷ್ಯಾವು ಉಕ್ರೇನ್ ವಿರುದ್ಧ ಯುದ್ಧ ಸಾರಿದೆ. ಹಾಗಾಗಿ ರಷ್ಯಾಕ್ಕೆ ಬೆಂಬಲಿಸಿದರೆ ನಿರ್ಬಂಧವನ್ನು ಎದುರಿಸಬೇಕಾಗುತ್ತದೆ ಎಂದು ಅಮೇರಿಕಾ ಚೀನಾಗೆ ತೀವ್ರವಾಗಿ ಎಚ್ಚರಿಕೆ ನೀಡಿದೆ.

ಜರ್ಮನಿಯಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಚೀನಾ ರಾಜತಾಂತ್ರಿಕ ಅಧಿಕಾರಿ ವಾಂಗ್ ಯೀ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅಮೆರಿಕಾದ ಸಚಿವ ಆಂಟೋನಿ ಬ್ಲಿಂಕೆನ್ ಅವರು, ಚೀನಾ ಅಧಿಕಾರಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾಗ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಚೀನಾದ ಸ್ಪೈ ಬಲೂನ್ ಅಮೆರಿಕಾದ ವಾಯು ಪ್ರದೇಶದಲ್ಲಿ ಹಾರಾಡಿದ್ದರ ಬಗ್ಗೆಯೂ ಮಾತನಾಡಿದ್ದಾರೆ. ಅಮೇರಿಕಾದ ಸಾರ್ವಭೌಮತ್ವವನ್ನು ಚೀನಾ ಉಲ್ಲಂಘನೆ ಮಾಡಿದೆ ಅಷ್ಟೇ ಅಲ್ಲ ಬೇಹುಗಾರಿಕೆ ನಡೆಸುತ್ತಿದೆ ಎಂದೂ ಅಮೆರಿಕಾ ಆರೋಪಿಸಿದೆ.  ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದೂ ಹೇಳಿದ್ದಾರೆ.

Home add -Advt

ಸ್ಪೈ ಬಲೂನ್ ಅನ್ನು ಅಮೆರಿಕಾ ಹೊಡೆದು ಉರುಳಿಸಿದಾಗಿನಿಂದ, ಒಳಗೊಳಗೆ ಪರಸ್ಪರರ ಮುನಿಸು ತಾರಕ್ಕಕ್ಕೇರಿದೆ. ಚೀನಾ ವಿನಂತಿಸಿಕೊಂಡಿದ್ದರೂ ಸಹ ಅಮೆರಿಕಾವು ತನ್ನ ಸಾರ್ಮಭೌಮತ್ವಕ್ಕೆ ಇದು ಧಕ್ಕೆ ತಂದಿದೆ ಎಂದು ಮುಲಾಜಿಲ್ಲದೇ ಬಲೂನನ್ನು ಹೊಡೆದು ಹಾಕಿತ್ತು. ಮೊದಲೇ ಕರೋನಾ ವೈರಸ್ ಹರಿಬಿಟ್ಟ ಅಪಖ್ಯಾತಿ ಮತ್ತು ಬೇಹುಗಾರಿಕೆ ನಡೆಸಿದ ಆರೋಪದಿಂದ ಚೀನಾವು ಕೆರಳಿ ಕೆಂಡಾಮಂಡಲವಾಗಿರುವುದಂತೂ ಸತ್ಯ.

*ರಾಮನಗರದ ರಾಮಮಂದಿರ ಆಗೇ ಆಗುತ್ತದೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/cm-basavaraj-bommaireactionhaveri/

Related Articles

Back to top button