Kannada NewsLatest

*ಬೆಳಗಾವಿ: ವಿವಿಧ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಫೆಬ್ರುವರಿ 22 ರಿಂದ 28 ರವರೆಗೆ ಭೇಟಿ ನೀಡಲಿದ್ದಾರೆ.

ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಸದರಿ ಸರ್ಕಾರಿ ಕೆಲಸ ನಿರ್ವಹಿಸಲು ಹಣ, ಲಂಚ, ವಸ್ತುಗಳ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಬಹುದು.

ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕುವಾರು ಭೇಟಿ ವಿವರ:

ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಬಿ.ಎಸ್ ಪಾಟೀಲ, ಫೆ.೨೨ ರಂದು ಮುಂಜಾನೆ ೧೧ ಗಂಟೆಯಿAದ ೨ ವರೆಗೆ ಕ. ಲೋ. ಕಛೇರಿ ಬೆಳಗಾವಿ, ಡಿ.ಎಸ್.ಪಿ. ಭರತ ಎಸ್.ಆರ್ ಇವರು ಫೆ.೨೨ ರಂದು ಮುಂಜಾನೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಸವದತ್ತಿ, ಪಿಐ ಅನ್ನಪೂರ್ಣ ಎಮ್. ಹುಲಗೂರ ಫೆ.೨೨ ರಂದು ಮುಂಜಾನೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಕಿತ್ತೂರು, ಯು.ಎಸ್.ಅವಟಿ ಇವರು ಫೆ.೨೨ ರಂದು ಮುಂಜಾನೆ ೧೧ ರಿಂದ ೨ ಗಂಟೆಯವರೆಗೆ ಪ್ರವಾಸಿ ಮಂದಿರ ರಾಮದುರ್ಗ ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ.

ಡಿ.ಎಸ್.ಪಿ.ಭರತ ಎಸ್ ಆರ್ ಇವರು ಫೆ.೨೩ ರಂದು ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಬೈಲಹೊಂಗಲ, ಅನ್ನಪೂರ್ಣ ಎಮ್. ಹುಲಗೂರ ಇವರು ಫೆ.೨೩ ರಂದು ೧೧ ರಿಂದ ೨ ಗಂಟೆಯವರೆಗೆ ಪ್ರವಾಸಿ ಮಂದಿರ ಖಾನಾಪೂರ, ಪಿಐ ಯು.ಎಸ್. ಅವಟಿ ಇವರು ಫೆ.೨೩ ರಂದು ಮುಂಜಾನೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಹುಕ್ಕೇರಿ, ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಪಿಐ ಪಿ.ರವಿಕುಮಾರ ಧರ್ಮಟ್ಟಿ ಇವರು ಫೆ. ೨೪ ರಂದು ಮುಂಜಾನೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ಕಾಗವಾಡ ಭೇಟಿ ನೀಡಲಿದ್ದಾರೆ.

ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಫೆ.೨೭ ರಂದು ಮುಂಜಾನೆ ೧೦:೩೦ ರಿಂದ ೧ ಗಂಟೆವರೆಗೆ ಪ್ರವಾಸಿ ಮಂದಿರ ಗೋಕಾಕ, ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಫೆ.೨೭ ರಂದು ಮಧ್ಯಾಹ್ನ ೦೨ ರಿಂದ ೪.೩೦ ಗಂಟೆಯವರೆಗೆ ತಹಶೀಲ್ದಾರ ಕಛೇರಿ ಮೂಡಲಗಿ. ಪಿಐ ಪಿ.ಆರ್.ಧಬಾಲಿ ಫೆ.೨೭ ರಂದು ಮುಂಜಾನೆ ೧೧ ರಿಂದ ೨ ಗಂಟೆ ವರೆಗೆ ಪ್ರವಾಸಿ ಮಂದಿರ ನಿಪ್ಪಾಣಿ, ಕರ್ನಾಟಕ ಲೋಕಾಯುಕ್ತ ಪಿಐ ಪಿ.ನಿರಂಜನ ಎಮ್. ಪಾಟೀಲ ಫೆ.೨೭ ರಂದು ಮುಂಜಾನೆ ೧೧ ರಿಂದ ೨ ಗಂಟೆಯವರೆಗೆ ಪ್ರವಾಸಿ ಮಂದಿರ ಚಿಕ್ಕೋಡಿ. ಕರ್ನಾಟಕ ಲೋಕಾಯುಕ್ತ ಪಿಐ ಪಿ.ನಿರಂಜನ ಎಮ್. ಪಾಟೀಲ ಫೆ.೨೮ ರಂದು ಮುಂಜಾನೆ ೧೧ ರಿಂದ ೨ ಗಂಟೆಯವರೆಗೆ ಪ್ರವಾಸಿ ಮಂದಿರ ರಾಯಬಾಗ. ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

*ಬಿಜೆಪಿ ಸರ್ಕಾರದ ಮೂರುವರೆ ವರ್ಷದ ಸಾಧನೆಯೇನು? ಯಾರಿಗಾದರೂ ಅಚ್ಛೇದಿನ ಬಂತಾ?; ಡಿ.ಕೆ.ಶಿವಕುಮಾರ್ ಪ್ರಶ್ನೆ*

https://pragati.taskdun.com/d-k-shivakumarprajadhwanikollegala/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button