Kannada NewsLatest

ಕರೋಶಿ ಯುವಕನ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಮನವಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಮನೆಯಲ್ಲಿ ಬಡತನದ ಪರಿಸ್ಥಿತಿ, ಯಾವುದೇ ಹೊಲ ಇಲ್ಲ, ಹೆಂಡತಿ, ಇಬ್ಬರು ಸಣ್ಣ ಮಕ್ಕಳು, ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ದುಡಿಯುವ ವ್ಯಕ್ತಿಗೆ ಲಿವರ್ ಸಿರೋಸೀಸ್ ಕಾಯಿಲೆ. ಈಗ ಲೀವರ್ ಕಸಿ ಮಾಡುವ ಅವಶ್ಯಕತೆ ಇದೆ ಇದಕ್ಕಾಗಿ 22 ಲಕ್ಷ ರೂ. ಖರ್ಚು ಬರಲಿದೆ, ಕೈಯಲ್ಲಿ ಕಾಸು ಇಲ್ಲ , ಏನು ಮಾಡುವುದು ಎಂಬ ಸ್ಥಿತಿ ಬಾಜಿರಾವ ಸುಳಕುಡೆ ಅವರ ಕುಟುಂಬಕ್ಕೆ ಬಂದೊದಗಿದೆ.

ಚಿಕ್ಕೋಡಿ ತಾಲೂಕಿನ ಕರೋಶಿಯ 32 ವರ್ಷದ ಯುವಕ ಬಾಜಿರಾವ್ ಸುಳಕುಡೆ ಅವರ ಲಿವರ್ ವಿಫಲವಾಗಿದೆ.
ಅವರು ಪಾನ್ ಶಾಪ್ ಅಂಗಡಿ ನಡೆಸುತ್ತಿದ್ದು, ಪತ್ನಿ, ತಾಯಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬವಿದೆ.

ಕೃಷಿ ಭೂಮಿ ಇಲ್ಲ. ಹೊಟ್ಟೆ ಮೇಲೆ ಕೈ:
ಬಾಜಿರಾವ್ ಸುಳಕುಡೆ ಅವರು ಕಳೆದ ಎರಡು ವರ್ಷಗಳಿಂದ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಸಹೋದರ ಪತ್ರಕರ್ತ ಕೆ.ಎಸ್. ಸುಳಕೂಡೆ ಅವರು ಅಲ್ಲಿ ಇಲ್ಲಿ ಸಾಲ ಮಾಡಿ ಚಿಕ್ಕೋಡಿ, ನಿಪ್ಪಾಣಿ ಮತ್ತು ಬೆಳಗಾವಿಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಾತ್ಕಾಲಿಕವಾಗಿ ಗುಣವಾಗುತ್ತದೆ. ಆದರೆ ಮತ್ತೆ ಆರೋಗ್ಯ ಹದಗೆಡುತ್ತದೆ.
ಬಾಜಿರಾವ ಅವರ ಚಿಕಿತ್ಸೆಗೆ ಇಲ್ಲಿಯವರೆಗೆ ಎಂಟು ಲಕ್ಷದವರೆಗೆ ಖರ್ಚಾಗಿದೆ.

ಸದ್ಯ ಬೆಳಗಾವಿ ಕೆಎಲ್ ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಜಿರಾವ್ ಸುಳಕುಡೆ ಅವರ ಲಿವರ್ ವಿಫಲವಾಗಿದ್ದು, ಲಿವರ್ ಕಸಿ ಮಾಡಬೇಕಾಗಿದೆ ಎಂದು ಅಲ್ಲಿನ ಹಿರಿಯ ವೈದ್ಯರು ಹೇಳಿದ್ದಾರೆ.

ಇದಕ್ಕೆ ಸುಮಾರು 22 ಲಕ್ಷ ರೂ. ವೆಚ್ಚವಾಗಲಿದೆ. ಆದರೆ ಕುಟುಂಬದ ಬಳಿ ಇದ್ದ ಹಣವೆಲ್ಲ ಖರ್ಚಾಗಿದ್ದು, ಈಗ ಲಿವರ್ ಕಸಿ ಹಾಗೂ ಇತರ ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದಂತಾಗಿದೆ.

ಬಾಜಿರಾವ್ ಸುಳಕೂಡೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಆದಷ್ಟು ಬೇಗ ಲಿವರ್ ಕಸಿ ಮಾಡಬೇಕಾಗಿದೆ.

ಆದ್ದರಿಂದ ಜನಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು, ಸಂಘ ಸಂಸ್ಥೆಗಳು, ದಾನಿಗಳು, ನಾಗರಿಕರಿಂದ ಆರ್ಥಿಕ ನೆರವು ಅಗತ್ಯವಾಗಿದೆ.
ದಾನಿಗಳು ಅವರು ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ: 19390100033095

IFSC ಕೋಡ್: FDRL0001939 ಅಥವಾ 9632731806 ಗೆ ಸಹಾಯ ಕಳುಹಿಸಿ ಎಂದು ಕೋರಲಾಗಿದೆ.

ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ: ಸಾಲ, ಸಹಾಯಧನ ಇತ್ಯಾದಿ (ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ)

https://pragati.taskdun.com/invitation-for-many-schemes-loan-subsidy-etc-link-to-apply/

ಇಬ್ಬರು ಯುವತಿಯರು ನಾಪತ್ತೆ

https://pragati.taskdun.com/missing-girls/

ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ ಕೇಸ್; ಆರೋಪಿಗೆ ಭಯೋತ್ಪಾದಕರ ಲಿಂಕ್

https://pragati.taskdun.com/home-minister-araga-jnanendrareactionstabing-youtinthshivamogga/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button