Latest

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಟೋಲ್ ಸಂಗ್ರಹ ಆರಂಭ; ಯಾವ ವಾಹನಕ್ಕೆ ಎಷ್ಟು ಶುಲ್ಕ?

ಪ್ರಗತಿವಾಹಿನಿ ಸುದ್ದಿ; ರಾಮನಗರ: ಪ್ರಧಾನಿ ನರೇಂದ್ರ ಮೋದಿಯವರಿಂದ ಮಾರ್ಚ್ 12ರಂದು ಉದ್ಘಾಟನೆಗೊಂಡಿದ್ದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಿದ್ದು, ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆಗಳು ತೀವ್ರಗೊಂಡಿವೆ.

ಬೆಂಗಳೂರಿನಿಂದ ಮೈಸೂರಿನತ್ತ ಸಾಗುವ ವಾಹನಗಳಿಗೆ ಬೆಂಗಳೂರಿನ ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರದ ಶೇಷಗಿರಿ ಫ್ಲಾಜಾದಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಒಂದೆಡೆ ಕನ್ನಡಪರ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರೆ ಮತ್ತೊಂದೆಡೆ ಮೊದಲ ದಿನವೇ ಟೋಲ್ ಸಂಗ್ರಹ ಅವ್ಯವಸ್ಥೆಗೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.

ಯಾವ ವಾಹನಕ್ಕೆ ಎಷ್ಟು ಶುಲ್ಕ?

  • ಕಾರು, ಜೀಪ್, ವ್ಯಾನ್ ಗೆ ಏಕಮುಖ ಸಂಚರಕ್ಕೆ 135 ರೂ. ಎರಡು ಕಡೆ ಸಂಚಾರಕ್ಕೆ 205 ರೂ.
  • ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂ
  • ಕಾರು, ಜೀಪ್ ವ್ಯಾನ್ ಗಳಿಗೆ ತಿಂಗಳ ಪಾಸ್ ಗೆ 4,425 ರೂ
  • ಲಘು ಸರಕು ವಾಹನ, ಮಿನಿ ಬಸ್ ಗಳ ಏಕಮುಖ ಸಂಚಾರಕ್ಕೆ 220 ರೂ. ಎರಡೂ ಕಡೆ ಸಂಚಾರಕ್ಕೆ 330 ರೂ
  • ಲಘು ಸರಕು ವಾಹನಗಳಿಗೆ ತಿಂಗಳ ಪಾಸ್ ದರ 7,315 ರೂ
  • ಟ್ರಕ್, ಬಸ್ ಏಕಮುಖ ಸಂಚಾರಕ್ಕೆ ಟೋಲ್ ದರ 460 ರೂ. ಎರಡೂ ಕಡೆ ಸಂಚಾರಕ್ಕೆ 690 ರೂ
  • ಟ್ರಕ್ ಬಸ್ ಗಳ ತಿಂಗಳ ಟೋಲ್ ಪಾಸ್ ದರ 15,325 ರೂ
  • ಆಕ್ಸೆಲ್ ವಾಣಿಜ್ಯ ವಾಹನ ಏಕಮುಖ ಸಂಚಾರ 500 ರೂ. ಎರಡು ಕಡೆ ಸಂಚಾರಕ್ಕೆ 750 ರೂ
  • ಅತಿ ಬಾರದ ವಾಹನ ಏಕಮುಖ ಸಂಚಾರಕ್ಕೆ 880 ರೂ ನಿಗದಿ. ಎರಡೂ ಕಡೆ ಸಂಚಾರಕ್ಕೆ 1315 ರೂ ನಿಗದಿ ಮಾಡಲಾಗಿದೆ.

Home add -Advt

Related Articles

Back to top button