Kannada NewsKarnataka NewsLatest

ಸೋಲು-ಗೆಲುವಿಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಅತ್ಯಂತ ಮುಖ್ಯ : ಕಿರಣ ಜಾಧವ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ಮಹಿಳಾ ಸಂಘ, ಸಾಹಿತ್ಯ ಕಲಾ ವೇದಿಕೆ ವತಿಯಿಂದ ರಾಗ ರಂಜಿನಿ ಕನ್ನಡ ಗೀತೆಗಳ ಸ್ಪರ್ಧೆ ಟಿಳಕವಾಡಿಯ ರೈಲ್ವೆ ಗೇಟ್ ಬಳಿಯ ವೆರ್ಣೇಕರ ಭವನದಲ್ಲಿ ಆಯೋಜಿಸಲಾಗಿತ್ತು.

Home add -Advt

ಬಿಜೆಪಿ ನಾಯಕ ಕಿರಣ ಜಾಧವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಇಂತಹ ಸ್ಪರ್ಧೆಗಳು ಪ್ರತಿಭೆಯನ್ನು ಹೊರ ತರುವಲ್ಲಿ ಅತ್ಯಂತ ಸಹಾಯಕವಾಗಿ ಪರಿಣಮಿಸುತ್ತವೆ. ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸೋಲು- ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಅತ್ಯಂತ ಮುಖ್ಯ” ಎಂದು ತಿಳಿಸಿದರು.

ಸಂಘಟನೆಗಳ ವತಿಯಿಂದ ಕಿರಣ ಜಾಧವ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

https://pragati.taskdun.com/money-being-carried-in-a-car-was-seized-near-hubli/
https://pragati.taskdun.com/covid-caseincrease1134-new-caseindia/
https://pragati.taskdun.com/belagavi13-lakhseizedmarket-police/

Related Articles

Back to top button