Kannada NewsKarnataka News

ಶೇಖ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್’ ಚೇರಮನ್ ಡಾ. ಅಬು ಶೇಖ್ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: – ಚೇರ್ಮನ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಶೇಖ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್’ ಡಾ. ಅಬು ಎ ಶೇಖ್ ಅಲ್ಪಕಾಲದ ಅನಾರೋಗ್ಯದ ನಂತರ ಬೆಳಗಾವಿಯಲ್ಲಿ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

Home add -Advt

ಅವರು ಪತ್ನಿ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಬುಧವಾರ ನಿಧನರಾದ ಶೇಖ್ ಅವರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ನೂರಾನಿ ಮಸೀದಿ ಸ್ಮಶಾನದಲ್ಲಿ ನಡೆಯಿತು. ಇದಕ್ಕೂ ಮೊದಲು ಶೇಖ್ ಕ್ಯಾಂಪಸ್‌ನಿಂದ ಅವರ ನಿವಾಸಕ್ಕೆ ಅವರ ಅಂತಿಮ ಯಾತ್ರೆ ಮಾಡಲಾಯಿತು.

ಐಎಎಸ್ ಅಧಿಕಾರಿ ದಿವಂಗತ ಡಾ. ಎ.ಎಂ ಶೇಖ್ ಅವರ ಪುತ್ರರಾಗಿದ್ದ ಡಾ.ಅಬು ಎ ಶೇಖ್ 1993 ರಲ್ಲಿ ಶೇಖ್ ಗ್ರುಪ್ ನ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಶೇಖ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳು ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಿದವು. ಜೊತೆಗೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನೂ ಆರಂಭಿಸಲಾಯಿತು.

ಅತ್ಯಂತ ಕ್ರಿಯಾಶೀಲರಾಗಿದ್ದ ಅಬು ಶೇಖ್ ಸ್ನೇಹಪರ ವ್ಯಕ್ತಿತ್ವ ಉಳ್ಳವರಾಗಿದ್ದರು.

https://pragati.taskdun.com/belagaviathanigirl-deathdirghadanda-namaskaracar-accident/

Related Articles

Back to top button