ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿದ್ದು, ಇದೊಂದು ಜನಸ್ನೇಹಿ ಬಜೆಟ್ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸಿಸಿದ್ದಾರೆ.
ಮಧ್ಯಮ ವರ್ಗದ ಪ್ರಗತಿಗೆ ಇದು ಸಹಕಾರಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಸಣ್ಣ ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದೆ. ಪ್ರಧಾನಮಂತ್ರಿ ಕರಮ್ ಯೋಗಿ ಮಾನ್‌ಧನ್ ಯೋಜನೆಯಡಿ ಒಂದೂವರೆ ಕೋಟಿ ರೂ. ಕಡಿಮೆ ಇರುವ ಚಿಲ್ಲರೆ ವ್ಯಾಪಾರಿ ಹಾಗೂ ಅಂಗಡಿ ಮಾಲೀಕರಿಗೆ ಪಿಂಚಣಿ ಸೌಲಭ್ಯ ದೊರೆಯಲಿದೆ. ಮನೆ ಖರೀದಿ ಮಾಡುವ ಮಧ್ಯಮ ವರ್ಗದ ಜನರಿಗೆ ತೆರಿಗೆ ಇಳಿಕೆ ಮಾಡಲಾಗಿದೆ. ರೂ. ೭ ಲಕ್ಷವರೆಗಿನ ಸಾಲಕ್ಕೆ ೧೫ ವರ್ಷಗಳವರೆಗೆ ತೆರಿಗೆ ವಿನಾಯತಿ ನೀಡಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಉಜ್ವಲ ಯೋಜನೆಯಡಿ ೩೫ ಕೋಟಿ ಎಲ್‌ಇಡಿ ಬಲ್ಬಗಳನ್ನು ವಿತರಿಸಲಾಗುತ್ತಿದೆ. ಶೂನ್ಯ ಬಜೆಟ್ ಕೃಷಿಯನ್ನು ಮರಳಿ ತರಬೇಕಿದ್ದು, ಇದರಿಂದ ರೈತರ ಆದಾಯ ದ್ವಿಗುಣಗೊಳಿಸಲು ಸಾಧ್ಯವಾಗುತ್ತದೆ. ೨೦೨೦ನೇ ಹಣಕಾಸು ವರ್ಷಕ್ಕೆ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ೪೦೦ ಕೋಟಿ ರೂ. ಅನುದಾನ ಕೊಟ್ಟಿರುವುದು ಸ್ವಾಗತಾರ್ಹ. ಪ್ರಧಾನಮಂತ್ರಿ ಆವಾಸ ಯೋಜನೆಯಡಿ ೮೦ ಲಕ್ಷಕ್ಕೂ ಅಧಿಕ ಮನೆಗಳ ನಿರ್ಮಾಣ, ಸಾರ್ವತ್ರಿಕ ಪ್ರಯಾಣಕ್ಕಾಗಿ ಎಟಿಎಂ ಮಾದರಿಯ ಒಂದು ದೇಶ, ಒಂದು ಕಾರ್ಡ, ೫ ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತಗೊಂಡಿವೆ. ಮುಂದಿನ ೫ ವರ್ಷದ ಅವಧಿಯಲ್ಲಿ ೧,೨೫,೦೦೦ ಕಿ.ಮೀ ರಸ್ತೆ ನಿರ್ಮಾಣಕ್ಕೆ ೮೦,೨೫೦ ಕೋಟಿ ರೂ. ಮೀಸಲಿಟ್ಟಿರುವುದು. ೨೦೨೨ ರ ವೇಳೆ ಪ್ರತಿಯೊಬ್ಬರಿಗೂ ಸೂರು ಒದಗಿಸುವುದು. ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಪ್ರತಿ ಮನೆಗೂ ಎಲ್‌ಪಿಜಿ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವ ಮಹತ್ವಕಾಂಕ್ಷೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ