Kannada News

ಹಲವು ರೋಗಗಳಿಗೆ ಉಚಿತ ತಪಾಸಣಾ ಶಿಬಿರ

ಉಚಿತ ಕ್ಯಾನ್ಸರ್, ಮೂತ್ರ ಪಿಂಡ (ಕಿಡ್ನಿ), ಥೈರಾಯ್ಡ್ ಮತ್ತು ಪ್ರಿಡಿಯಾಬಿಟಿಸ್ ಬಳಲುವ ರೋಗಗಳಿಗೆ ಉಚಿತ ತಪಾಸಣಾ ಶಿಬಿರ

ಕೆ.ಎಲ್.ಇ. ಆಯುರ್ವೇದ ಆಸ್ಪತ್ರೆ, ಶಹಾಪೂರ-ಬೆಳಗಾವಿ ಇಲ್ಲಿ ಈ ಕೆಳಗಿನ ಪ್ರಕಾರ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

1. ಕ್ಯಾನ್ಸರ್‌ದಿಂದ ಬಳಲುವ ರೋಗಿಗಳಿಗೆ ದಿನಾಂಕ 18-07-2019, ಗುರುವಾರ ದಿವಸ ಮುಂಜಾನೆ 9.00 ರಿಂದ 1.00 ಮದ್ಯಾಹ್ನ 3.00 ರಿಂದ 5.00 ರವರೆಗೆ. ಈ ಶಿಬಿರದ ಲಾಭವನ್ನು ಇಚ್ಛಿಸುವ ರೋಗಿಗಳು ತಮ್ಮ ರಕ್ತ / ಸ್ಕಾನ್ / ಸೂಜಿತಪಾಸಣೆಯ, ವಿವರನೆಗಳೊಂದಿಗೆ ಬರಬೇಕು. ಈ ಶಿಬಿರಕ್ಕೆ ಪುಣೆಯ ಪ್ರಖ್ಯಾತ ರಸಾಯು ಕ್ಯಾನ್ಸರ ಕ್ಲಿನಿಕ ವೈದ್ಯರು ರೋಗಿಗಳೀಗೆ ಸೂಕ್ತ ಸಲಹೆ ನೀಡಲಿದ್ದಾರೆ.

2. ಮೂತ್ರ ಪಿಂಡ (ಕಿಡ್ನಿ) ಸಂಭಂದಿಸಿದ ರೋಗಗಳು ಮತ್ತು ಕಿಡ್ನಿ ವೈಫಲ್ಯದಲ್ಲಿ ದಿನಾಂಕ 18-07-2019 ರಂದು ಗುರುವಾರ ದಿವಸ ಮುಂಜಾನೆ 9.00 ರಿಂದ 1.00 ರವರೆಗೆ ಉಚಿತ ಸಲಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರಕ್ಕೆ ಬೆಳಗಾವಿಯ ಪ್ರಖ್ಯಾತ ಕಿಡ್ನಿ ವೈದ್ಯರು ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಿದ್ದಾರೆ.

3. ಥೈರಾಯ್ಡ್ದಿಂದ ಬಳಲುವ ರೋಗಿಗಳಿಗೆ ದಿನಾಂಕ 19-07-2019 ರಂದು ಶುಕ್ರವಾರ ದಿವಸ ಮುಂಜಾನೆ 9.00 ರಿಂದ 1.00 ಮದ್ಯಾಹ್ನ 3.00 ರಿಂದ 5.00 ರವರೆಗೆ ಉಚಿತ ಸಲಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

4. ಶನಿವಾರ ದಿನಾಂಕ: 20-07-2019 ರಂದು ಮುಂಜಾನೆ 9.00 ರಿಂದ 1.00 ಮದ್ಯಾಹ್ನ 3.00 ರಿಂದ 5.00 ರವರೆಗೆ ಉಚಿತ ಪ್ರಿಡಿಯಾಬಿಟಿಸ್ ತಪಾಸಣೆ ಅಂದರೆ ದಪ್ಪಗಿರುವವರು, ಒತ್ತಡದ ಜೀವನ, ಅಧಿಕ ರಕ್ತದೊತ್ತಡ, ವಂಶಪರಂಪರೆ, ಗರ್ಭಾವಸ್ಧೆಯಲ್ಲಿ ಮಧುಮೇಹ ಹೀಗೆ ಇರುವ 18 ರಿಂದ 60 ರ ವಯಸ್ಸಿನವರಲ್ಲಿ ಡಯಾಬಿಟಿಸ್ ಬರುವ ಸಂಭವ ಅಧಿಕ ಇರುತ್ತದೆ ಇದನ್ನು ತಡೆಗಟ್ಟಲು ಉಚಿತ ತಪಾಸಣೆ ಮತ್ತು ಚಿಕಿತ್ಸೆ ನಿಡಲಾಗುವುದು.

ಆಸಕ್ತರು ಈ ಶಿಬಿರದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button