Latest

*ಮತಗಟ್ಟೆ ಬಳಿ ಮಾರಾಮಾರಿ; ದೊಣ್ಣೆಯಿಂದ ಹಲ್ಲೆ ನಡೆಸಿದ ಗ್ಯಾಂಗ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನದ ವೇಳೆ ಮತಗಟ್ಟೆ ಬಳಿ ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ. ಗಾಂಜಾ ಮತ್ತಲ್ಲಿ ಬಂದ ಯುವಕರ ಗುಂಪು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪದ್ಮನಾಭನಗರದಲ್ಲಿ ನಡೆದಿದೆ.

ಪದ್ಮನಾಭನಗರದ ಪಾಪಯ್ಯ ಗಾರ್ಡನ್ ಮತಗಟ್ಟೆ ಸಂಖ್ಯೆ 28 ಹಾಗೂ 29ರಲ್ಲಿ ಗಾಂಜಾ ಮತ್ತಿನಲ್ಲಿ ಬಂದ 30ಕ್ಕೂ ಹೆಚ್ಚು ಜನ ಯುವಕರ ಗುಂಪು ಏಕಾಏಕಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಹಲವು ಮಹಿಳೆಯರ ಮೇಲೂ ಹಲ್ಲೆ ನಡೆಸಲಾಗಿದೆ.

Home add -Advt

ಮಾಜಿ ಕಾರ್ಪೊರೇಟರ್ ಕಬ್ಬಾಳ್ ಉಮೇಶ್ ಯುವಕರ ಗುಂಪಿನ್ನು ಕಳುಹಿಸಿ ಈ ರೀತಿ ಗಲಾತೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತಗಟ್ಟೆ ಬಳಿ ಆತಂಕದ ವಾತಾವರಣ ನಿರ್ಮಾನವಾಗಿದೆ.

https://pragati.taskdun.com/khanapuraanjali-nimbalkarbjp-activistpoling-booth/


Related Articles

Back to top button