Kannada NewsKarnataka NewsLatest

ಮನೆಯಿಂದ ಮತದಾನ ನಿರಾಕರಿಸಿ ಮತಗಟ್ಟೆಗೇ ಬಂದು ಮತ ಚಲಾಯಿಸಿದ ಹಿರಿಯ ನಾಗರಿಕ ದಂಪತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣಾ ಆಯೋಗ ಇದೇ ಮೊದಲ ಬಾರಿ 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಅನುಕೂಲವಾಗಲೆಂದು ಮನೆಯಿಂದ ಮತದಾನಕ್ಕೆ ಕಲ್ಪಿಸಿದ ಅವಕಾಶ ನಿರಾಕರಿಸಿದ ಹಿರಿಯ ನಾಗರಿಕ ದಂಪತಿ ಮತಗಟ್ಟೆಗೇ ಬಂದು ಮತದಾನ ಮಾಡುವ ಮೂಲಕ ಯುವ ಮತದಾರರಿಗೆ ನಾಗರಿಕ ಜವಾಬ್ದಾರಿ ನಿಭಾಯಿಸುವ ವಿಷಯದಲ್ಲಿ ಮಾದರಿಯಾಗಿದ್ದಾರೆ.

94 ವರ್ಷದ ಎಂ.ಎಚ್.ಧೂಳಖೇಡ್ ಹಾಗೂ 88 ವರ್ಷದ ಇಂದಿರಾಬಾಯಿ ಧೂಳಖೇಡ್ ಮನೆಯಿಂದ ಮತದಾನ ಮಾಡಲು ನಿರಾಕರಿಸಿದ್ದರು. ಇಂದು ಅವರು ವಡಗಾಂವ್ ಕಾಲೇಜಿನ ಮತಗಟ್ಟೆಗೆ ಆಗಮಿಸಿ ತಮ್ಮ ಪರಮಾಧಿಕಾರ ಚಲಾಯಿಸಿದರು.

ಮತದಾನ ನಮ್ಮ ಸಂವಿಧಾನ ನೀಡಿದ ಪರಮಾಧಿಕಾರವಾಗಿದ್ದು ಯಾವುದೇ ಪರಿಸ್ಥಿತಿಯಲ್ಲೂ ಅದನ್ನು ನಿಭಾಯಿಸಬೇಕೆಂಬ ಬಗ್ಗೆ ಈ ಮೂಲಕ ಅವರು ಯುವ ಮತದಾರರಿಗೆ ಮಾದರಿಯಾಗಿ ಈ ಕರ್ತವ್ಯ ನಿಭಾಯಿಸಿದ್ದಾರೆ. ಅವರ ಕಾರ್ಯಕ್ಕೆ ಆಡಳಿತವೂ ಸೇರಿದಂತೆ ಸಾಮಾಜಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

https://pragati.taskdun.com/cet-online-mock-test-on-may-11and-13-here-is-the-qr-code-for-registration/
https://pragati.taskdun.com/a-woman-gave-birth-to-a-male-child-in-the-polling-booth-building/
https://pragati.taskdun.com/exit-poll-congress-the-largest-party/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button