Latest

ಕ್ಲೈಮ್ಯಾಕ್ಸ್ ಗುರುವಾರಕ್ಕೆ….

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಕೋರಲಿದ್ದಾರೆ.

Home add -Advt

ಶುಕ್ರವಾರ ವಿಶ್ವಾಸಮತ ಕೋರಲು ದಿನನಿಗದಿ ಮಾಡುವಂತೆ ಸಿಎಂ ಸ್ಪೀಕರ್ ಬಳಿ ವಿನಂತಿಸಿದರು. ಆದರೆ ಬಿಜೆಪಿ ನಾಳೆಯೇ ವಿಶ್ವಾಸಮತ ಕೋರಬೇಕು ಎಂದು ಪಟ್ಟು ಹಿಡಿಯಿತು.

ನಾಳೆ ಅಥವಾ ಬುಧವಾರ ನಿಗದಿಪಡಿಸದಿದ್ದರೆ ನಾವು ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ. ವಿಶ್ವಾಸವೇ ಇಲ್ಲದ ಸರಕಾರ ಏನು ಕಲಾಪ ನಡೆಸುತ್ತದೆ ಎಂದು ಬಿಜೆಪಿ ಪ್ರಶ್ನಿಸಿತು.

ಆದರೆ ಅಂತಿಮವಾಗಿ ಸ್ಪೀಕರ್ ರಮೇಶ ಕುಮಾರ ಗುರುವಾರವನ್ನು ನಿಗದಿಪಡಿಸಿದರು.

ತನ್ಮೂಲಕ ಈ ಸರಕಾರದ ಅಳಿವು-ಉಳಿವಿನ ಕ್ಲೈಮ್ಯಾಕ್ಸ್ ಗುರುವಾರಕ್ಕೆ ಹೋಗಿದೆ.

Related Articles

Back to top button