Latest

*ಆರ್.ಎಸ್.ಎಸ್.ಸಂಘಟನೆ ಬ್ಯಾನ್ ಮಾಡಲು ಹಿಂದೇಟು ಹಾಕಲ್ಲ; ನೂತನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೋಮು ವಿಷಬೀಜ ಬಿತ್ತಿ ರಾಜಕೀಯ ಬೇಳೆ ಬೇಸಿಕೊಳ್ಳುವರ ವಿರುದ್ಧ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯದ ನೆಮ್ಮದಿ ಕೆಡಿಸುವ ಯಾವುದೇ ಸಂಘಟನೆಯಾಗೈರಲಿ ಅಂಥಹ ಸಂಘಟನೆಯನ್ನು ಕಾನೂನು ಚೌಕಟ್ಟಿನಲ್ಲಿ ಕಟ್ಟಿ ಹಾಕುತ್ತೇವೆ ಎಂದರು.

Home add -Advt

ಅದು ಬಜರಂಗದಳವಾಗಿರಬಹುದು ಅಥವಾ ಪಿಎಫ್ ಐ ಆಗಿರಬಹುದು ಅಥವಾ ಆರ್.ಎಸ್.ಎಸ್ ಸಂಘಟನೆಯೇ ಆಗಿರಬಹುದು ಅಂತಹ ಸಂಘಟನೆಯನ್ನು ಬ್ಯಾನ್ ಮಾಡಲು ಹಿಂದೇಟು ಹಾಕಲ್ಲ ಎಂದು ತಿಳಿಸಿದ್ದಾರೆ.

https://pragati.taskdun.com/basavaraj-bommaireactioncongress-govt/


Related Articles

Back to top button