LatestUncategorized

*ಭೀಕರ ವಿಮಾನ ದುರಂತ; 50 ದಿನಗಳ ಬಳಿಕ ಅಮೇಜಾನ್ ಕಾಡಿನಲ್ಲಿ ಜೀವಂತವಾಗಿ ಪತ್ತೆಯಾದ ಹಸುಳೆಸೇರಿ ನಾಲ್ವರು ಮಕ್ಕಳು*

ಪ್ರಗತಿವಾಹಿನಿ ಸುದ್ದಿ; ಬೊಗೊಟಾ: ಲಘುವಿಮಾನ ಅಪಘಾತಕ್ಕೀಡಾಗಿ ತಂದೆ-ತಾಯಿ ಪೈಲಟ್ ಸಾವನ್ನಪ್ಪಿದ್ದು, ದುರಂತ ನಡೆದ 50 ದಿನಗಳ ಬಳಿಕ ಒಂದು ವರ್ಷದ ಮಗು ಸೇರಿ ನಾಲ್ವರು ಮಕ್ಕಳು ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಪತ್ತೆಯಾಗಿರುವ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.

ಕುಟುಂಬವೊಂದು ಪ್ರಯಾಣಿಸುತ್ತಿದ್ದ ಲಘು ವಿಮಾನ ಸೆಸ್ನಾ 206 ಅಮೆಜಾನ್ ಪ್ರಾಂತ್ಯದ ಅರರಾಕುರ ಗುವಾವೈರೆ ಪ್ರಾಂತ್ಯದಿಂದ ಮೇ 1ರಂದು ಹೊರಟಿತ್ತು. ವಿಮಾನದಲ್ಲಿ 1 ವರ್ಷದ ಮಗು ಸೇರಿ ನಾಲ್ವರು ಮಕ್ಕಳು, ಓರ್ವ ಮಹಿಳೆ, ಓರ್ವ ಪುರುಷ, ಪೈಲಟ್ ಸೇರಿ ಒಟ್ಟು 7 ಜನರು ಇದ್ದರು. ಸ್ವಲ್ಪ ದೂರ ಪ್ರಯಾಣಿಸುತ್ತಿದ್ದಂತೆ ವಿಮಾನದಲ್ಲಿ ತಾಂತ್ರಿಕ ದೋಷವುಂಟಾಗಿದೆ ಎಂದು ಪೈಲಟ್ ಘೋಷಿಸಿದ್ದರು. ಗುವಾವೈರೆ-ಕುಕೆಟಾ ಸಮೀಪ ವಿಮಾನ ಅಪಘಾತಕ್ಕೀಡಾಗಿ ಪೈಲಟ್, ವಿಮಾನದಲ್ಲಿದ್ದ ಮಹಿಳೆ, ಇನ್ನೋರ್ವರು ಸೇರಿ ಮೂವರು ಮೃತಪಟ್ಟಿದ್ದರು. ಆದರೆ ವಿಮಾನದಲ್ಲಿದ್ದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು.

ವಿಮಾನ ಮರಕ್ಕೆ ಜೋತು ಬಿದ್ದ ರೀತಿಯಲ್ಲಿ ಪತ್ತೆಯಾಗಿತ್ತು. ವಿಮಾನದ ಬಳಿಯೇ ಮೂರು ಮೃತದೇಹಗಳು ಪತ್ತೆಯಾಗಿತ್ತು. ಆದರೆ ಮಕ್ಕಳ ಸುಳಿವು ಸಿಕ್ಕಿರಲಿಲ್ಲ. ಮಕ್ಕಳಿಗಾಗಿ ಸೇನಾಪಡೆ ಹಾಗೂ ಸ್ಥಳೀಯ ತಂಡದಿಂದ ತೀವ್ರ ಶೋಧ ನಡೆಸಲಾಗಿತ್ತು. ಕೊಲಂಬಿಯಾ ವಿಮಾನ, ಹೆಲಿಕಾಪ್ಟರ್, ಶ್ವಾನ ಪಡೆ ಮೂಲಕವೂ ಮಕ್ಕಳ ಪತ್ತೆಗಾಗಿ ಕಾಡಲ್ಲಿ ಹುಡುಕಾಡಲಾಗಿತ್ತು. ಆದರೂ ಮಕ್ಕಳು ಪತ್ತೆಯಾಗಿರಲಿಲ್ಲ. ವಿಮಾನ ದುರಂತ ಸಂಭವಿಸಿ ಬರೋಬ್ಬರು 50 ದಿನಗಳ ಬಳಿಕ ಮಕ್ಕಳು ಅದೇ ಕಾಡಿನಲ್ಲಿ ಪತ್ತೆಯಾಗಿದ್ದಾರೆ.

ವಿಮಾನ ದುರಂತ ಸಂಭವಿಸಿದ ಪ್ರದೇಶದಿಂದ 5 ಕಿ.ಮೀ ದೂರದಲ್ಲಿ ನಾಲ್ವರು ಮಕ್ಕಳು ಇರುವ ಬಗ್ಗೆ ಸೇನಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. 13, 9, 4 ಹಾಗೂ 1 ವರ್ಷದ ಮಗು ಸೇರಿ ನಾಲ್ವರು ಮಕ್ಕಳು ಸಿಕ್ಕಿದ್ದು, ಆಹಾರ ನೀರು ಸಿಗದೇ ಕಾಡಿನಲ್ಲಿ ಬಳಲಿ ಹೋಗಿರುವ ಮಕ್ಕಳು ಬದುಕಿರುವುದೇ ಅಚ್ಚರಿಯಾಗಿದೆ. ಅಸ್ವಸ್ಥಗೊಂಡಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೋ ಪೆಟ್ರೋ ವೈದ್ಯಕೀಯ ತಂದಕ್ಕೆ ಸೂಚಿಸಿದ್ದಾರೆ.

https://www.pragativahini.com/free-busshakti-schemekarnataka/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button